ಚಾ.ನಗರದಲ್ಲಿ ಪತ್ರಕರ್ತರ ಸಂಘದಿಂದ ಕ್ರೀಡಾಕೂಟ

ಚಾ.ನಗರದಲ್ಲಿ ಪತ್ರಕರ್ತರ ಸಂಘದಿಂದ ಕ್ರೀಡಾಕೂಟ

Jun 19, 2017 01:03:16 PM (IST)

ಚಾಮರಾಜನಗರ: ಪತ್ರಿಕಾ ದಿನಾಚರಣೆಯ ಅಂಗವಾಗಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗಾಗಿ ಕ್ರೀಡಾಕೂಟ ನಡೆಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಧರ್ಮೇಂದ್ರಕುಮರ್ ಮೀನಾ ಅವರು ಕ್ರೀಡಾಕೂಟವನ್ನು ಗುಂಡು ಎಸೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಎಲ್ಲರೂ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಶಕ್ತಿ ಹೊಂದಲು ಸಾಧ್ಯವಾಗುತ್ತದೆ ಎಂದರು. ಜಿಪಂನ  ಡಾ. ಹರೀಶ್ ಕುಮಾರ್ ಮಾತನಾಡಿ ಜಿಲ್ಲೆಯ ಪತ್ರಕರ್ತರು 24 ಘಂಟೆಗಳ ಕಾಲ ತಮ್ಮ ಕೆಲಸಗಳಲ್ಲಿ ನಿರತರಾಗಿರುತ್ತೀರಿ. ವರ್ಷದಲ್ಲಿ ಒಮ್ಮೆಯಾದರು ಕ್ರೀಡಾ ಕೂಟದಲ್ಲಿ ಭಾಗವಹಿಸಿ ಮನೋರಂಜನೆಯನ್ನು ಪಡೆಯುವ  ದಿನ ಇದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗಾಯತ್ರಿ, ಸಂಘದ ಅಧ್ಯಕ್ಷ ಎಸ್.ಎಂ.ನಂದೀಶ್, ಕಾಯದರ್ಶಿ ದೇವರಾಜು ಕಪ್ಪಸೋಗೆ, ಪತ್ರಕರ್ತರಾದ ಗೌಡಳ್ಳಿ ಮಹೇಶ್, ಮಂಜುನಾಥ್, ಕ್ರೀಡಾಪಟು ಶ್ರೀನಿವಾಸ್, ಜಿಲ್ಲೆಯ ಎಲ್ಲ ಪತ್ರಕರ್ತರು ಹಾಗೂ ಕುಟುಂಬದವರು ಇದ್ದರು.