ಹೇಲ್ಸ್ ಅಬ್ಬರದ ಬ್ಯಾಟಿಂಗ್: ಸರಣಿ ಸಮಬಲಗೊಳಿಸಿದ ಇಂಗ್ಲೆಂಡ್

ಹೇಲ್ಸ್ ಅಬ್ಬರದ ಬ್ಯಾಟಿಂಗ್: ಸರಣಿ ಸಮಬಲಗೊಳಿಸಿದ ಇಂಗ್ಲೆಂಡ್

HSA   ¦    Jul 07, 2018 10:02:54 AM (IST)
ಹೇಲ್ಸ್ ಅಬ್ಬರದ ಬ್ಯಾಟಿಂಗ್: ಸರಣಿ ಸಮಬಲಗೊಳಿಸಿದ ಇಂಗ್ಲೆಂಡ್

ಕಾರ್ಡಿಫ್: ಅಲೆಕ್ಸ್ ಹೇಲ್ಸ್ ಉತ್ತಮ ಆಟದ ನೆರವಿನಿಂದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ 5 ವಿಕೆಟ್ ಗೆಲುವು ದಾಖಲಿಸಿಕೊಂಡ ಇಂಗ್ಲೆಂಡ್ ಸರಣಿಯಲ್ಲಿ ಸಮಬಲ ಸಾಧಿಸಿದೆ.

ಹೇಲ್ಸ್ ಮತ್ತು ಜಾನಿ ಬೇರ್ಸ್ಟೋವ್ ಅಂತ್ಯದಲ್ಲಿ ಆಕ್ರಮಣಕಾರಿ ಆಟವಾಡಿ ತಂಡವನ್ನು ಗೆಲುವಿನ ಮೆಟ್ಟಿಲೇರಿಸಿದರು.

149 ರನ್ ಗಳ ಗೆಲುವಿನ ಗುರಿ ಬೆನ್ನಟ್ಟುತ್ತಿದ್ದ ಇಂಗ್ಲೆಂಡ್ ಗೆ ಜಾಸನ್ ರಾಯ್(15) ಮತ್ತು ಬಟ್ಲರ್(14) ಉತ್ತಮ ಆರಂಭ ಒದಗಿಸಿಕೊಟ್ಟು ಉಮೇಶ್ ಯಾದವ್ ಗೆ ವಿಕೆಟ್ ಒಪ್ಪಿಸಿದರು. ಇದರ ಬಳಿಕ ಜೋ ರೂಟ್ 9 ರನ್ ಮಾಡಿ ಚಾಹಲ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಮೊರ್ಗನ್ 17 ರನ್ ಮಾಡಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.

ಇದರ ಬಳಿಕ ಹೇಲ್ಸ್ ಮತ್ತು ಬೇರ್ಸ್ಟೋವ್ 18 ಎಸೆತಗಳಲ್ಲಿ 28 ರನ್ ಗಳ ಜತೆಯಾಟ ನಡೆಸಿ ತಂಡವನ್ನು ಗೆಲುವಿನ ಮೆಟ್ಟಿಲೇರಿಸಿದರು. ಹೇಲ್ಸ್ 4 ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಸಿದರು.

ಇದಕ್ಕೂ ಮೊದಲು ಟೀಂ ಇಂಡಿಯಾದ ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭ ಕೊಡಲು ವಿಫಲರಾದರು. ಇದರ ಬಳಿಕ ಕೆಎಲ್ ರಾಹುಲ್ 6 ರನ್ ಮಾಡಿ ನಿರ್ಗಮಿಸಿದರು.

ಸುರೇಶ್ ರೈನಾ 27 ಮತ್ತು ಕೊಹ್ಲಿ 47 ರನ್ ಮಾಡಿ ತಂಡಕ್ಕೆ ಆಧಾರವಾದರು. ಅಂತ್ಯದಲ್ಲಿ ಧೋನಿ 24 ಎಸೆತಗಳಲ್ಲಿ 32 ರನ್ ಬಾರಿಸಿ ತಂಡದ ಗೌರವಾರ್ಹ ಮೊತ್ತಕ್ಕೆ ನೆರವಾದರು.