ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಪೋಗಟ್, ಪೂನಿಯಾ ಹೆಸರು ಶಿಫಾರಸು

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಪೋಗಟ್, ಪೂನಿಯಾ ಹೆಸರು ಶಿಫಾರಸು

HSA   ¦    Apr 29, 2019 03:31:47 PM (IST)
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಪೋಗಟ್, ಪೂನಿಯಾ ಹೆಸರು ಶಿಫಾರಸು

ನವದೆಹಲಿ: ಕುಸ್ತಿ ಪಟುಗಳಾಗಿರುವ ವಿನೇಶ್ ಪೋಗಟ್ ಮತ್ತು ಬಜರಂಗ್ ಪೂನಿಯಾ ಅವರನ್ನು ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ.

2104ರಲ್ಲಿ ಗ್ಲಾಸ್ಗೊ ಗೇಮ್ಸ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಎರಡು ಸ್ವರ್ಣ ಮತ್ತು 2018ರ ಗೋಲ್ಡ್ ಕೋಸ್ಟ್ ನಲ್ಲಿ ಸ್ವರ್ಣ ಗೆದ್ದಿರುವ ವಿನೇಶ್ ಪೋಗಟ್ 2016ರಲ್ಲಿ ಅರ್ಜುನ್ ಪ್ರಶಸ್ತಿ ಪಡೆದಿದ್ದರು.

2018ರಲ್ಲಿ ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಪದಕ ಗೆದ್ದಿದ್ದ ಬಜರಂಗ್ ಪೂನಿಯಾ ರಸ್ಲಿಂಗ್ ರ‍್ಯಾಂಕಿಂಗ್ ನಲ್ಲಿ ಮೊದಲ ಸ್ಥಾನ ಪಡೆದಿದ್ದರು. ಭಾರತದ ಕುಸ್ತಿ ಪಟು ವಿಶ್ವ ಮಟ್ಟದಲ್ಲಿ ಮೊದಲ ಸ್ಥಾನ ಪಡೆದಿರುವುದು ಇದೇ ಮೊದಲಾಗಿತ್ತು. 2015ರಲ್ಲಿ ಅವರು ಅರ್ಜುನ್ ಪ್ರಶಸ್ತಿ ಕೂಡ ಗೆದ್ದಿದ್ದರು.