ರೋಹಿತ್ ಶರ್ಮಾಗೆ ಪಂದ್ಯ ಶುಲ್ಕದ ಶೇ.15ರಷ್ಟು ದಂಡ

ರೋಹಿತ್ ಶರ್ಮಾಗೆ ಪಂದ್ಯ ಶುಲ್ಕದ ಶೇ.15ರಷ್ಟು ದಂಡ

HSA   ¦    Apr 29, 2019 09:47:53 AM (IST)
ರೋಹಿತ್ ಶರ್ಮಾಗೆ ಪಂದ್ಯ ಶುಲ್ಕದ ಶೇ.15ರಷ್ಟು ದಂಡ

ನವದೆಹಲಿ: ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ನಿಯಮ ಉಲ್ಲಂಘಿಸಿದ ರೋಹಿತ್ ಶರ್ಮಾಗೆ ಪಂದ್ಯ ಶುಲ್ಕದ ಶೇ.15ರಷ್ಟು ದಂಡ ಹೇರಲಾಗಿದೆ.

ರನ್ ಬೆನ್ನಟ್ಟುತ್ತಿದ್ದ ವೇಳೆ ಎಲ್ಬಿಡಬ್ಲ್ಯೂ ಆದ ಬಳಿಕ ವಿಕೆಟ್ ಗೆ ಬ್ಯಾಟ್ ನಿಂದ ಹೊಡೆದ ಕಾರಣಕ್ಕಾಗಿ ಶರ್ಮಾಗೆ ದಂಡ ಹೇರಲಾಗಿದೆ.

ಕೊಲ್ಕತ್ತಾ ಪೇರಿಸಿದ್ದ ಬೃಹತ್ ಮೊತ್ತವಾದ 233 ರನ್ ಗಳನ್ನು ಬೆನ್ನಟ್ಟುತ್ತಿದ್ದ ವೇಳೆ ನಾಲ್ಕನೇ ಓವರ್ ನಲ್ಲಿ ಶರ್ಮಾ ಎಲ್ಬಿಡಬ್ಲ್ಯೂಗೆ ಒಳಗಾದರು. ಇದರಿಂದ ಸಿಟ್ಟುಗೊಂಡು ಬ್ಯಾಟ್ ನಿಂದ ಸ್ಟಂಪ್ ಮುರಿದು ಹಾಕಿದ್ದರು.

ಇದೇ ವೇಳೆ ರೋಹಿತ್ ಅವರು ಅಂಪಾಯರ್ ಗಳೊಂದಿಗೆ ಕೂಡ ವಾಗ್ವಾದ ಮಾಡಿದ್ದಾರೆ. ಪಂದ್ಯದ ಬಳಿಕ ರೆಫ್ರಿ ನೀಡಿದ ವರದಿ ಬಳಿಕ ಶರ್ಮಾಗೆ ದಂಡ ಹೇರಲಾಯಿತು.