ಏಶ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಹರ್ವಿಂದರ್ ಗೆ ಸ್ವರ್ಣ

ಏಶ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಹರ್ವಿಂದರ್ ಗೆ ಸ್ವರ್ಣ

HSA   ¦    Oct 10, 2018 03:35:03 PM (IST)
ಏಶ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಹರ್ವಿಂದರ್ ಗೆ ಸ್ವರ್ಣ

ಜಕಾರ್ತ: ಭಾರತದ ಬಿಲ್ಲುಗಾರ ಹರ್ವಿಂದರ್ ಸಿಂಗ್ ಅವರು ಇಲ್ಲಿ ನಡೆಯುತ್ತಿರುವ ಏಶ್ಯನ್ ಪ್ಯಾರಾ ಗೇಮ್ಸ್ ನ ಪುರುಷರ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಸ್ವರ್ಣ ಗೆದ್ದುಕೊಂಡಿದ್ದಾರೆ.

ಹರ್ವಿಂದರ್ ಅವರು ಚೀನಾದ ಝವೊ ಲಿಕ್ಸ್ ಯು ವಿರುದ್ಧ 6-0 ಗೆಲುವು ದಾಖಲಿಸಿಕೊಂಡರು. ಪುರುಷರ ಡಿಸ್ಕಸ್ ವಿಭಾಗದಲ್ಲಿ ಮೋನು ಬೆಳ್ಳಿ, ಶಾಟ್ ಪುಡ್ ಎಫ್ 46 ವಿಭಾಗದಲ್ಲಿ ಮುಹಮ್ಮದ್ ಯಾಸಿರ್ ಕಂಚು ಗೆದ್ದುಕೊಂಡರು.

ಮೋನು 35.89 ಮೀ.ದೂರಕ್ಕೆ ಡಿಸ್ಕಸ್ ಎಸೆದರು. ಯಾಸಿರ್ 14.22 ಮೀ. ದೂರಕ್ಕೆ ಕಬ್ಬಿಣದ ಗುಂಡನ್ನು ಎಸೆದು ಕಂಚು ಜಯಿಸಿದರು.