ಫೋರ್ಬ್ಸ್ ಅಗ್ರ 100 ಶ್ರೀಮಂತ ಕ್ರೀಡಾಳುಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ

ಫೋರ್ಬ್ಸ್ ಅಗ್ರ 100 ಶ್ರೀಮಂತ ಕ್ರೀಡಾಳುಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ

HSA   ¦    Jun 12, 2019 10:55:15 AM (IST)
ಫೋರ್ಬ್ಸ್ ಅಗ್ರ 100 ಶ್ರೀಮಂತ ಕ್ರೀಡಾಳುಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ

ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಫೋರ್ಬ್ಸ್ 2019 ವಿಶ್ವದ ಅತೀ ಹೆಚ್ಚು ಸಂಪಾದಿಸುವ ಕ್ರೀಡಾಳುಗಳ ಪಟ್ಟಿಯಲ್ಲಿ ಅಗ್ರ 100ರಲ್ಲಿ ಸ್ಥಾನ ಪಡೆದಿದ್ದಾರೆ.

ಅಗ್ರ 100ರಲ್ಲಿ ಸ್ಥಾನ ಪಡೆಯುವವರಲ್ಲಿ ಕೊಹ್ಲಿ ಅವರು ಸ್ಥಾನ ಪಡೆದಿರುವ ಏಕೈಕ ಆಟಗಾರರಾಗಿದ್ದಾರೆ. ಕೊಹ್ಲಿ ಅವರು ಜಾಹೀರಾತುಗಳಿಂದ 21 ಮಿಲಿಯನ್ ಅಮೆರಿಕನ್ ಡಾಲರ್ ಮತ್ತು ಸಂಬಳದಿಂದ 4 ಮಿಲಿಯನ್ ಪಡೆಯುತ್ತಾರೆ. ಒಟ್ಟಾಗಿ 25 ಮಿಲಿಯನ್ ಅಮೆರಿಕನ್ ಡಾಲರ್ ಸಂಪಾದಿಸುತ್ತಾರೆ ಎಂದು ಫೋರ್ಬ್ಸ್ ಹೇಳಿದೆ.

ಬಾರ್ಸಿಲೋನಾ ಕ್ಲಬ್ ಪರವಾಗಿ ಆಡುತ್ತಿರುವ ಅರ್ಜೆಟೀನಾದ ಆಟಗಾರ ಲಿಯೊನಲ್ ಮೆಸ್ಸಿ ಅವರು 127 ಮಿಲಿಯನ್ ಅಮೆರಿಕನ್ ಡಾಲರ್ ಪಡೆದು ಅಗ್ರ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೆನಾಲ್ಡೊ ಅವರು 109 ಮಿಲಿಯನ್ ಡಾಲರ್ ಸಂಪಾದಿಸಿ ಬಳಿಕದ ಸ್ಥಾನ ಪಡೆದಿರುವರು.