ಜಾಸನ್ ರಾಯ್ ಭರ್ಜರಿ ಬ್ಯಾಟಿಂಗ್: ಗೆಲುವಿನ ಖಾತೆ ತೆರೆದ ಡೆಲ್ಲಿ

ಜಾಸನ್ ರಾಯ್ ಭರ್ಜರಿ ಬ್ಯಾಟಿಂಗ್: ಗೆಲುವಿನ ಖಾತೆ ತೆರೆದ ಡೆಲ್ಲಿ

HSA   ¦    Apr 15, 2018 09:08:52 AM (IST)
ಜಾಸನ್ ರಾಯ್ ಭರ್ಜರಿ ಬ್ಯಾಟಿಂಗ್: ಗೆಲುವಿನ ಖಾತೆ ತೆರೆದ ಡೆಲ್ಲಿ

ನವದೆಹಲಿ: ಆರಂಭಿಕ ಜಾಸನ್ ರಾಯ್ ಬಾರಿಸಿದ ಭರ್ಜರಿ 91 ರನ್ ನೆರವಿನಿಂದ ಡೆಲ್ಲಿ ಡೇರ್ ಡೇವಿಲ್ಸ್ ಐಪಿಎಲ್ ನಲ್ಲಿ ಮುಂಬಯಿ ಇಂಡಿಯನ್ಸ್ ನ್ನು ಪರಾಭವಗೊಳಿಸಿ, ಈ ವರ್ಷದ ಐಪಿಎಲ್ ನಲ್ಲಿ ತನ್ನ ಮೊದಲ ಗೆಲುವು ದಾಖಲಿಸಿಕೊಂಡಿದೆ.

ಮುಂಬಯಿ ಕಳಪೆ ಬೌಲಿಂಗ್ ನಿಂದಾಗಿ ಡೆಲ್ಲಿ ಬ್ಯಾಟ್ಸ್ ಮೆನ್ ಗಳು 195 ರನ್ ಗಳ ಗೆಲುವಿನ ಮೊತ್ತ ಬೆನ್ನಟ್ಟಿತು. ರಾಯ್ 91 ರನ್ ಮಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 47 ರನ್ ಮಾಡಿದ ರಿಷಬ್ ಪಂತ್ ಇವರಿಗೆ ಸರಿಯಾದ ಜತೆ ನೀಡಿದರು. ರಾಯ್ 6 ಸಿಕ್ಸರ್ ಮತ್ತು ಆರು ಬೌಂಡರಿ ಬಾರಿಸಿದರು. ರಾಯ್ ಮತ್ತು ಗಂಭೀರ್ ತಂಡಕ್ಕೆ ಉತ್ತಮ ಜತೆಯಾಟ ಒದಗಿಸಿಕೊಟ್ಟರು. ಇವರಿಬ್ಬರು 5 ಓವರ್ ಗಳಲ್ಲಿ 50 ರನ್ ಪೇರಿಸಿದರು. 

ಇದಕ್ಕೂ ಮೊದಲು ಸೂರ್ಯಕುಮಾರ್ ಯಾದವ್ ಮತ್ತು ಎವಿನ್ ಲೆವಿನಸ್ ಮುಂಬಯಿಗೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಆದರೆ ಡೆಲ್ಲಿ ಬೌಲರ್ ಗಳು ಉತ್ತಮ ಬೌಲಿಂಗ್ ಸಂಘಟಿಸಿ ಅಂತ್ಯದ ಓವರ್ ಗಳಲ್ಲಿ ಮುಂಬಯಿಯು 200ರ ಗಡಿ ದಾಟದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.