ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿ ರದ್ದು

ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿ ರದ್ದು

HSA   ¦    Mar 13, 2020 07:40:27 PM (IST)
ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿ ರದ್ದು

ಮುಂಬಯಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದು, ಸರಣಿಯ ಉಳಿದ ಪಂದ್ಯಗಳನ್ನು ಕೊರೋನಾ ವೈರಸ್ ಭೀತಿಯಿಂದ ರದ್ದು ಮಾಡಲಾಗಿದೆ.

ಮಾರ್ಚ್ 15ರಂದು ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡನೇ ಏಕದಿನ ಪಂದ್ಯ ನಡೆಯಬೇಕಾಗಿತ್ತು. ಮೂರನೇ ಏಕದಿನ ಪಂದ್ಯವು ಮಾರ್ಚ್ 18ರಂದು ಈಡನ್ ಗಾರ್ಡನ್ಸ್ ನಡೆಯಬೇಕಿತ್ತು.

ಆದರೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬಾರದು ಎನ್ನುವ ಕಾರಣದಿಂದಾಗಿ ಈಗ ಪಂದ್ಯಗಳನ್ನು ರದ್ದು ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಮೂರು ಪಂದ್ಯಗಳ ಸರಣಿಯನ್ನು ಆಯೋಜಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೇಳಿದೆ.