ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಫೈನಲಿಗೆ

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಫೈನಲಿಗೆ

HSA   ¦    May 23, 2018 09:21:19 AM (IST)
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಫೈನಲಿಗೆ

ಮುಂಬೈ: ಎರಡು ವರ್ಷಗಳ ನಿಷೇಧ ಬಳಿಕ ಮರಳಿರುವ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೊದಲ ಪ್ರಯತ್ನದಲ್ಲೇ ಐಪಿಎಲ್ ನ ಫೈನಲಿಗೇರಿದೆ.

ನಿನ್ನೆ ಇಲ್ಲಿನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಎರಡು ವಿಕೆಟ್ ಗಳ ರೋಚಕ ಗೆಲುವು ದಾಖಲಿಸಿಕೊಂಡಿದೆ.

140 ರನ್ ಗಳ ಗೆಲುವಿನ ಗುರಿ ಬೆನ್ನಟ್ಟುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಒಂದು ಹಂತದಲ್ಲಿ 62 ರನ್ ಗಳಿಗೆ ಆರು ವಿಕೆಟ್ ಕಳಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಡು ಪ್ಲೆಸಿಸ್ 67 ರನ್ ಮಾಡಿ ಏಕಾಂಗಿಯಾಗಿ ಹೋರಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿ ಕೇವಲ 140 ರನ್ ಮಾಡಲಷ್ಟೇ ಶಕ್ತವಾಯಿತು. ಕಾರ್ಲೋಸ್ ಬ್ರಾಥ್ ವೇಟ್ 29 ಎಸೆತಗಳಲ್ಲಿ 43 ರನ್ ಬಾರಿಸಿ ತಂಡ ಮೂರಂಕಿ ದಾಟಲು ನೆರವಾದರು.