ವಿಶ್ವಕಪ್ ಹಾಕಿ: ಬೆಲ್ಜಿಯಂ ವಿರುದ್ಧ ಡ್ರಾ ಸಾಧಿಸಿದ ಭಾರತ

ವಿಶ್ವಕಪ್ ಹಾಕಿ: ಬೆಲ್ಜಿಯಂ ವಿರುದ್ಧ ಡ್ರಾ ಸಾಧಿಸಿದ ಭಾರತ

HSA   ¦    Dec 03, 2018 02:49:59 PM (IST)
ವಿಶ್ವಕಪ್ ಹಾಕಿ: ಬೆಲ್ಜಿಯಂ ವಿರುದ್ಧ ಡ್ರಾ ಸಾಧಿಸಿದ ಭಾರತ

ನವದೆಹಲಿ: ಹಾಕಿ ವಿಶ್ವಕಪ್ ಗ್ರೂಪ್ ಸಿ ವಿಭಾಗದ ಮಹತ್ವದ ಪಂದ್ಯದಲ್ಲಿ ಭಾರತ ತಂಡವು ಬೆಲ್ಜಿಯಂ ವಿರುದ್ಧ ಅದ್ಭುತವಾಗಿ ಆಡಿ 2-2ರ ಡ್ರಾ ಸಾಧಿಸಿದೆ.

ಆರಂಭಿಕ ಹಿನ್ನಡೆಯಿಂದ ಮೇಲೆದ್ದು ಬಂದ ಭಾರತ ದ್ವಿತೀಯಾರ್ಧದಲ್ಲಿ ಆಕರ್ಷಕ ಆಟವಾಡಿತು. ಈ ಮೂಲಕ ಕ್ವಾರ್ಟರ್ ಫೈನಲಿಗೆ ನೇರ ಪ್ರವೇಶ ಮಾಡುವ ಒಳ್ಳೆಯ ಅವಕಾಶ ಉಳಿಸಿಕೊಂಡಿದೆ.

ಭಾರತವು ಈಗ ಗ್ರೂಪ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಗೋಲು ಅಂತರದಿಂದಾಗಿ ಬೆಲ್ಜಿಯಂ ಎರಡನೇ ಸ್ಥಾನದಲ್ಲಿದೆ. ಎರಡು ತಂಡಗಳು ಸಮಾನ ಅಂಕಗಳನ್ನು ಪಡೆದುಕೊಂಡಿದೆ.

ಎಂಟನೇ ನಿಮಿಷದಲ್ಲಿ ಸಿಕ್ಕಿ ಪೆನಾಲ್ಟಿ ಕಾರ್ನರ್ ನಿಂದ ಬೆಲ್ಜಿಯಂನ ಅಲೆಕ್ಸಾಂಡರ್ ಹೆಂಡ್ರಿಕ್ಸ್ ಅವರು ಗೋಲು ಬಾರಿಸಿದರು. ಇದರ ಬಳಿಕ ಹರ್ಮನ್ ಪ್ರೀತ್ ಸಿಂಗ್ ಭಾರತಕ್ಕೆ ಸಮಬಲ ಒದಗಿಸಿಕೊಟ್ಟರು. 47ನೇ ನಿಮಿಷದಲ್ಲಿ ಸಿರ್ಮನ್ ಜೀತ್ ಸಿಂಗ್ ಗೋಲು ಬಾರಿಸಿ ಮುನ್ನಡೆ ಒದಗಿಸಿಕೊಟ್ಟರು.

56ನೇ ನಿಮಿಷದಲ್ಲಿ ಬೆಲ್ಜಿಯಂನ ಫ್ಲೊರೆಂಟ್ ವ್ಯಾನ್ ಔಬೆಲ್ ಗೋಲು ಬಾರಿಸಿ ಸಮಬಲ ಒದಗಿಸಿಕೊಟ್ಟರು.