ಮತ್ತೊಂದು ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಮತ್ತೊಂದು ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

HSA   ¦    Aug 15, 2019 02:31:06 PM (IST)
ಮತ್ತೊಂದು ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ತನ್ನ 43ನೇ ಶತಕ ದಾಖಲಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ವಿಶ್ವದಾಖಲೆ ಬರೆದಿದ್ದಾರೆ.

ಕೊಹ್ಲಿ ಕಳೆದ 10 ವರ್ಷಗಳಲ್ಲಿ 20 ಸಾವಿರ ಅಂತಾರಾಷ್ಟ್ರೀಯ ರನ್ ಬಾರಿಸಿದ ಮೊದಲ ಬ್ಯಾಟ್ಸ್ ಮೆನ್ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.

ವಿಂಡೀಸ್ ವಿರುದ್ಧ ಸತತ ಎರಡನೇ ಶತಕ ಬಾರಿಸಿದ ಕೊಹ್ಲಿ ತಂಡ ಆರು ವಿಕೆಟ್ ಗೆಲುವು ದಾಖಲಿಸಿಕೊಳ್ಳಲು ನೆರವಾದರು.

ದಶಕದಲ್ಲಿ ಅತೀ ಗರಿಷ್ಠ ರನ್ ಮಾಡಿದವರಲ್ಲಿ ಕೊಹ್ಲಿ ಬಳಿಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 18,962, ದಕ್ಷಿಣ ಅಫ್ರಿಕಾದ ಆಲ್ ರೌಂಡರ್ ಜಾಕಸ್ ಕಲೀಸ್ 16,777, ಶ್ರೀಲಂಕಾದ ಮಹೇಲ ಜಯವರ್ಧನೆ 16,304, ಕುಮಾರ ಸಂಗಕ್ಕರ 15,999, ಸಚಿನ್ ತೆಂಡೂಲ್ಕರ್ 15,962, ರಾಹುಲ್ ದ್ರಾವಿಡ್ 15,853 ಮತ್ತು ದಕ್ಷಿಣ ಆಫ್ರಿಕಾರ ಹಶಿಮ್ ಆಮ್ಲಾ (15,185 ರನ್) ಅವರಿದ್ದಾರೆ.