ವಾರ್ಷಿಕ ಗುತ್ತಿಗೆ ಒಪ್ಪಂದದಿಂದ ಧೋನಿ ಹೊರಗಿಟ್ಟ ಬಿಸಿಸಿಐ

ವಾರ್ಷಿಕ ಗುತ್ತಿಗೆ ಒಪ್ಪಂದದಿಂದ ಧೋನಿ ಹೊರಗಿಟ್ಟ ಬಿಸಿಸಿಐ

HSA   ¦    Jan 16, 2020 04:00:06 PM (IST)
ವಾರ್ಷಿಕ ಗುತ್ತಿಗೆ ಒಪ್ಪಂದದಿಂದ ಧೋನಿ ಹೊರಗಿಟ್ಟ ಬಿಸಿಸಿಐ

ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿರುವ 2019-20ನೇ ಸಾಲಿನ ವಾರ್ಷಿಕ ಒಪ್ಪಂದದಿಂದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಹೊರಗಿಡಲಾಗಿದೆ.

ಗ್ರೇಡ್ ಎ+ ಆಟಗಾರರ ವಿಭಾಗದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪೀತ್ ಬುಮ್ರಾ ಅವರನ್ನಿಡಲಾಗಿದೆ. ಇವರೆಲ್ಲರೂ ಅಕ್ಟೋಬರ್ 2019ರಿಂದ ಸಪ್ಟೆಂಬರ್ 2020ರ ತನಕ 7 ಕೋಟಿ ರೂಪಾಯಿ ಪಡೆಯಲಿದ್ದಾರೆ. ಈ ಮೂವರು 2018-19ನೇ ಸಾಲಿನಲ್ಲಿ ಇದೇ ಗ್ರೇಡ್ ನಲ್ಲಿದ್ದರು.

ಇಂಗ್ಲೆಂಡ್ ನಲ್ಲಿ ಕಳೆದ ವರ್ಷ ನಡೆದ ವಿಶ್ವಕಪ್ ಸೆಮಿಫೈನಲ್ ಬಳಿಕ ಧೋನಿ ಟೀಂ ಇಂಡಿಯಾದ ಪರವಾಗಿ ಆಡಿರಲಿಲ್ಲ. ಧೋನಿ ಎ ಗ್ರೇಡ್ ಆಟಗಾರರ ಪಟ್ಟಿಯಲ್ಲಿದ್ದು, ಅವರಿಗೆ ವಾರ್ಷಿಕ ಐದು ಕೋಟಿ ನೀಡಲಾಗುತ್ತಿತ್ತು.

ಗ್ರೇಡ್ ಬಿಯಲ್ಲಿ ಮಾಯಾಂಕ್ ಅಗರ್ವಾಲ್ ಅವರು ಸೇರ್ಪಡೆಯಾಗಿದ್ದು, ವಾರ್ಷಿ ಮೂರು ಕೋಟಿ ಪಡೆಯುವರು. ಅದೇ ನವದೀಪ್ ಸೈನಿ, ಶ್ರೇಯಸ್ ಅಯ್ಯರ್ ಮತ್ತು ವಾಷಿಂಗ್ಟನ್ ಸುಂದರ್ ಮತ್ತು ದೀಪಕ್ ಚಾಹರ್ ಗ್ರೇಡ್ ಸಿ ಆಟಗಾರರಾಗಿದ್ದು, ವಾರ್ಷಿಕ ಒಂದು ಕೋಟಿ ಗಳಿಕೆ ಮಾಡುವರು.