ಜೇಮ್ಸ್ ಫೌಕ್ನರ್ ಸಲಿಂಗಿಯಲ್ಲ: ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟನೆ

ಜೇಮ್ಸ್ ಫೌಕ್ನರ್ ಸಲಿಂಗಿಯಲ್ಲ: ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟನೆ

HSA   ¦    Apr 30, 2019 06:03:24 PM (IST)
ಜೇಮ್ಸ್ ಫೌಕ್ನರ್ ಸಲಿಂಗಿಯಲ್ಲ: ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟನೆ

ಮೆಲ್ಬೊರ್ನ್: ಆಸ್ಟ್ರೇಲಿಯಾದ ಆಲ್ ರೌಂಡರ್ ಜೇಮ್ಸ್ ಫೌಕ್ನರ್ ಅವರು ಸಲಿಂಗಿ ಅಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾವು ಸ್ಪಷ್ಟನೆ ನೀಡಿದೆ.

ಜೇಮ್ಸ್ ಫೌಕ್ನರ್ ಅವರು ತನ್ನ ಸಾಮಾಜಿಕ ಖಾತೆಯಲ್ಲಿ ಊಟ ಮಾಡುತ್ತಿದ್ದ ಫೋಟೊ ಹಾಕಿ `ದ ಬಾಯ್ ಫ್ರೆಂಡ್' ಎಂದು ಬರೆದಿದ್ದರು. ಆದರೆ ಇದು ಕೇವಲ ತಮಾಷೆಗೆ ಬರೆದಿರುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

ಸೋಮವಾರ 29ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಫೌಕ್ನರ್ ಅವರು ರೆಸ್ಟೋರೆಂಟ್ ನಲ್ಲಿ ತನ್ನ ತಾಯಿ ಹಾಗೂ ಸ್ನೇಹಿತನೊಬ್ಬನ ಜತೆಗೆ ಕುಳಿತು ಊಟ ಮಾಡುತ್ತಿರುವ ಫೋಟೊ ಹಾಕಿದ್ದರು. ಇದರಲ್ಲಿ ಬಾಯ್ ಫ್ರೆಂಡ್ ಜತೆಗೆ ಡಿನ್ನರ್ ಎಂದು ಬರೆದಿದ್ದರು.

ಇದಕ್ಕೆ ಸುಮಾರು 20 ಸಾವಿರ ಲೈಕ್ಸ್ ಬಂದಿತ್ತು ಮತ್ತು ಅಂತಾರಾಷ್ಟ್ರೀಯ ಆಟಗಾರರು ಬೆಂಬಲ ವ್ಯಕ್ತಪಡಿಸಿದ್ದರು. ಗ್ಲೆನ್ ಮ್ಯಾಕ್ಸ್ ವೆಲ್ ಹುಟ್ಟುಹಬ್ಬದ ಶುಭ ಹಾರೈಸಿ, ಶ್ರೇಷ್ಠ ಧೈರ್ಯ ಎಂದಿದ್ದರು.

ಶಾನ್ ಟೇಟ್ ಕೂಡ ಶ್ರೇಷ್ಠ ಧೈರ್ಯ, ಹುಟ್ಟುಹಬ್ಬದ ದಿನ ವಿಶೇಷ ಭಾವನೆಯಾಗುತ್ತಿರಬಹುದು ಎಂದು ಬರೆದಿದ್ದರು.

ಇಂಗ್ಲೆಂಡಿನ ಡೈಲಿ ಮೇಲ್ ಮತ್ತು ಗಾರ್ಡಿಯನ್ ಪತ್ರಿಕೆಗಳು ಸಲಿಂಗಿ ಎಂದು ಒಪ್ಪಿಕೊಂಡ ಮೊದಲ ಆಸ್ಟ್ರೇಲಿಯಾದ ಕ್ರಿಕೆಟಿಗ ಎಂದು ವರದಿ ಮಾಡಿತ್ತು.