ಬಾಕ್ಸರ್ ಅಮಿತ್ ಪಂಗಲ್ ಹೆಸರು ಅರ್ಜುನ್ ಪ್ರಶಸ್ತಿಗೆ ಶಿಫಾರಸ್ಸು

ಬಾಕ್ಸರ್ ಅಮಿತ್ ಪಂಗಲ್ ಹೆಸರು ಅರ್ಜುನ್ ಪ್ರಶಸ್ತಿಗೆ ಶಿಫಾರಸ್ಸು

HSA   ¦    Sep 12, 2018 04:59:11 PM (IST)
ಬಾಕ್ಸರ್ ಅಮಿತ್ ಪಂಗಲ್ ಹೆಸರು ಅರ್ಜುನ್ ಪ್ರಶಸ್ತಿಗೆ ಶಿಫಾರಸ್ಸು

ನವದೆಹಲಿ: ಇತ್ತೀಚೆಗೆ ಇಂಡೋನೇಶ್ಯಾದಲ್ಲಿ ಕೊನೆಗೊಂಡ ಏಶ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದ್ದ ಬಾಕ್ಸರ್ ಅಮಿತ್ ಪಂಗಲ್ ಅವರ ಹೆಸರನ್ನು ಅರ್ಜುನ್ ಪ್ರಶಸ್ತಿ ಶಿಫಾರಸ್ಸು ಮಾಡಲಾಗಿದೆ.

ಪುರುಷರ ಲೈಟ್ ಫ್ಲೈವೆಯ್ಟ್(49) ವಿಭಾಗದಲ್ಲಿ ಅಮಿತ್ ಪಂಘಲ್ ಅವರು ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ಅಮಿತ್ ಫೈನಲಿನಲ್ಲಿ ಒಲಿಂಪಿಕ್ಸ್ ನ ಸ್ವರ್ಣ ಪದಕ ವಿಜೇತ ಬಾಕ್ಸರ್ ಉಜ್ಬೇಕಿಸ್ತಾನದ ಹಸನ್ಬಾಯ್ ಡುಸ್ಮಟೊವ್ ವಿರುದ್ಧ 3-2ರಿಂದ ಗೆಲುವು ದಾಖಲಿಸಿಕೊಂಡಿದ್ದಾರೆ.

22ರ ಹರೆಯದ ಹರಿಯಾಣದ ಬಾಕ್ಸರ್ ಏಶ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಗೆದ್ದ ಎಂಟನೇ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅರ್ಜುನ್ ಪ್ರಶಸ್ತಿಗೆ ನನ್ನ ಹೆಸರನ್ನು ಶಿಫಾರಸ್ಸು ಮಾಡಿರುವುದು ತುಂಬಾ ಹೆಮ್ಮೆಯೆನಿಸುತ್ತಿದೆ. ಇದನ್ನು ವರ್ಣಿಸಲು ಸಾಧ್ಯವಿಲ್ಲ. ಪದಕವೇ ನನ್ನ ಬಗ್ಗೆ ಮಾತನಾಡುತ್ತಿದೆ ಮತ್ತು ನಾನು ಕೂಡ ಇದನ್ನೇ ಬಯಸಿದ್ದೆ ಎಂದು ಅಮಿತ್ ಹೇಳಿದರು.