ಬಿಎಫ್ಐ ಮಂಡಳಿಯ ಮಹಿಳಾ ಪ್ರತಿನಿಧಿಯಾಗಿ ಸರಿತಾ ದೇವಿ

ಬಿಎಫ್ಐ ಮಂಡಳಿಯ ಮಹಿಳಾ ಪ್ರತಿನಿಧಿಯಾಗಿ ಸರಿತಾ ದೇವಿ

YK   ¦    Jan 11, 2018 10:30:12 AM (IST)
ಬಿಎಫ್ಐ ಮಂಡಳಿಯ ಮಹಿಳಾ ಪ್ರತಿನಿಧಿಯಾಗಿ ಸರಿತಾ ದೇವಿ

ನವದೆಹಲಿ: ಭಾರತ ಬಾಕ್ಸಿಂಗ್ ಸಂಸ್ಥೆಗೆ ಎಲ್. ಸರಿತಾ ದೇವಿ ಅವರು ಕಾರ್ಯನಿರ್ವಾಹಕ ಮಂಡಳಿಗೆ ಮಹಿಳಾ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ರೋಹ್ಟಕ್ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಚಾಂಪಿಯನ್ಷಿಪ್ ವೇಳೆ ನಡೆದ ಚುನಾವಣೆಯಲ್ಲಿ ಸರಿತಾ ದೇವಿಗೆ 31 ರಲ್ಲಿ 22 ತಂಡಗಳ ನಾಯಕರು ಮತ ನೀಡಿದ್ದಾರೆ.

‘ಎರಡು ದಿನದ ಹಿಂದೆಯಷ್ಟೇ ಚುನಾವಣೆಗೆ ನಿಲ್ಲುವ ನಿರ್ಧಾರಕ್ಕೆ ಬಂದೆ. ಹಿರಿಯ ಬಾಕ್ಸರ್ ಆಗಿರುವುದರಿಂದ ಮಹಿಳೆಯರಿಗೆ ಧ್ವನಿಯಾಗುವುದು ಮುಖ್ಯ ಎಂದು ನನಗೆ ಅನ್ನಿಸಿತು’ ಎಂದು ಸರಿತಾ ಅಭಿಪ್ರಾಯಪಟ್ಟಿದ್ದಾರೆ.