ಕೊಹ್ಲಿ ಜತೆಗಿನ ಸ್ನೇಹಕ್ಕೆ ರಾಜಕೀಯದ ಹಂಗಿಲ್ಲ: ಅಫ್ರಿದಿ

ಕೊಹ್ಲಿ ಜತೆಗಿನ ಸ್ನೇಹಕ್ಕೆ ರಾಜಕೀಯದ ಹಂಗಿಲ್ಲ: ಅಫ್ರಿದಿ

HSA   ¦    Feb 11, 2018 01:18:32 PM (IST)
ಕೊಹ್ಲಿ ಜತೆಗಿನ ಸ್ನೇಹಕ್ಕೆ ರಾಜಕೀಯದ ಹಂಗಿಲ್ಲ: ಅಫ್ರಿದಿ

ಸೇಂಟ್ ಮೊರ್ಟಿಜ್: ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಮತ್ತು ತನ್ನ ನಡುವಿನ ಸ್ನೇಹಕ್ಕೆ ರಾಜಕೀಯ ಪರಿಸ್ಥಿತಿಯ ಹಂಗಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಹೀದ್ ಅಫ್ರಿದಿ ಹೇಳಿದ್ದಾರೆ.

ವಿರಾಟ್ ಒಬ್ಬ ಅದ್ಭುತ ವ್ಯಕ್ತಿ ಮತ್ತು ಆತನ ರಾಷ್ಟ್ರದ ಕ್ರಿಕೆಟಿನ ರಾಯಭಾರಿ. ನಾನು ನನ್ನ ರಾಷ್ಟ್ರದ ರಾಯಭಾರಿ ಎಂದು ಸೇಂಟ್ ಮೊರ್ಟಿಜ್ ನಲ್ಲಿ ನಡೆಯುತ್ತಿರುವ ಐಸ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಆಡುತ್ತಿರುವ ಅಫ್ರಿದಿ ಮಾಧ್ಯಮದೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಕೊಹ್ಲಿ ತುಂಬಾ ಗೌರವ ತೋರಿಸುತ್ತಾರೆ ಮತ್ತು ನಮ್ಮ ಫೌಂಡೇಶನ್ ಗೆ ಜೆರ್ಸಿಗೆ ಸಹಿ ಮಾಡಲು ಅವರು ಎಲ್ಲವನ್ನು ಮೀರಿ ಹೋಗಿದ್ದಾರೆ ಎಂದರು.

ಅಫ್ರಿದಿ ಫೌಂಡೇಶನ್ ಪಾಕಿಸ್ತಾನದಲ್ಲಿ ತುಂಬಾ ಕಳೆಮಟ್ಟದಲ್ಲಿರುವ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತದೆ.

ಕೊಹ್ಲಿ ಜತೆಗೆ ಮಾತನಾಡಿದಾಗ ನನಗೆ ತುಂಬಾ ಗೌರವ ಹಾಗೂ ಒಳ್ಳೆಯ ಭಾವನೆಯಾಗಿದೆ. ನಮಗಿಬ್ಬರಿಗೆ ಹೆಚ್ಚು ಮಾತನಾಡಲು ಅವಕಾಶ ಸಿಗುವುದಿಲ್ಲ. ಕೆಲವೊಂದು ಸಲ ಅವರು ಮೆಸೇಜ್ ಹಾಕುವರು. ಇದಕ್ಕೆ ನಾನು ಪ್ರತಿಕ್ರಿಯಿಸುತ್ತೇನೆ. ಇತ್ತೀಚೆಗೆ ಅವರು ಮದುವೆಯಾದಾಗ ನಾನು ಅಭಿನಂದಿಸಿದ್ದೆ ಎಂದು ಹೇಳಿದ್ದಾರೆ.

ವೈಯಕ್ತಿಕವಾಗಿ ಉತ್ತಮ ಸಂಬಂಧವನ್ನು ಇಟ್ಟುಕೊಂಡಿರುವ ಕ್ರಿಕೆಟಿಗರು ದೇಶದ ಉತ್ತಮ ಸಂಬಂಧಕ್ಕೆ ಉದಾಹರಣೆಯಾಗಬೇಕು. ಪಾಕಿಸ್ತಾನ ಬಳಿಕ ನನಗೆ ಹೆಚ್ಚಿನ ಗೌರವ ಹಾಗೂ ಪ್ರೀತಿ ಸಿಕ್ಕಿದ ಎರಡು ದೇಶಗಳೆಂದರೆ ಅದು ಭಾರತ ಮತ್ತು ಆಸ್ಟ್ರೇಲಿಯಾ ಎಂದು ತಿಳಿಸಿದ್ದಾರೆ.