ಆಸ್ಟ್ರೇಲಿಯ ಮುಡಿಗೆ ವಿಶ್ವಕಪ್‌ ಕ್ರಿಕೆಟ್

ಆಸ್ಟ್ರೇಲಿಯ ಮುಡಿಗೆ ವಿಶ್ವಕಪ್‌ ಕ್ರಿಕೆಟ್

YK   ¦    Mar 08, 2020 08:16:48 PM (IST)
ಆಸ್ಟ್ರೇಲಿಯ ಮುಡಿಗೆ ವಿಶ್ವಕಪ್‌ ಕ್ರಿಕೆಟ್

ಮೆಲ್ಬೋರ್ನ್: ಚೊಚ್ಚಲ ಬಾರಿಗೆ ಮಹಿಳಾ ಟಿ-20 ವಿಶ್ವಕಪ್ ಗೆಲ್ಲುವ ಭಾರತದ ಕನಸಿಗೆ ಪೆಟ್ಟು ಬಿದ್ದಿದೆ. ಫೈನಲ್ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದ ಹರ್ಮನ್ ಪ್ರೀತ್ ಪಡೆ ಸೋಲು ಕಂಡಿದೆ.

ಆಸ್ಟ್ರೇಲಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಅಮೋಘ ಪ್ರದರ್ಶನ ನೀಡಿ ಮತ್ತೊಮ್ಮೆ ವಿಶ್ವಕಪ್ ಗೆ ಮುತ್ತಿಟ್ಟು ಸಂಭ್ರಮಿಸಿದೆ.

ಮೊದಲು ಬ್ಯಾಟ್ ಮಾಡಿದ ಆಸೀಸ್ 20 ಓವರ್ ಗಳಲ್ಲಿ 4 ವಿಕೆಟ್ ಗೆ 184 ರನ್ ಕಲೆ ಹಾಕಿತು. ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 19.1 ಓವರ್ ಗಳಲ್ಲಿ 99 ರನ್ ಗಳಿಗೆ ಆಲೌಟ್ ಆಗಿದೆ.

ಈ ಮೂಲಕ ಕಾಂಗರೂ ವನಿತೆಯರು 85 ರನ್ ಜಯ ದಾಖಲಿಸಿದ್ದಾರೆ. ಅಲ್ಲದೆ ಪ್ರೇಕ್ಷಕರ ಸಮ್ಮುಖದಲ್ಲಿ ವಿಶ್ವಕಪ್ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.