ಶ್ರೀಕಾಂತ್ ಗೆ ಕ್ವಾರ್ಟರ್ ಫೈನಲಿನಲ್ಲಿ ಸೋಲು: ಭಾರತದ ಸವಾಲು ಅಂತ್ಯ

ಶ್ರೀಕಾಂತ್ ಗೆ ಕ್ವಾರ್ಟರ್ ಫೈನಲಿನಲ್ಲಿ ಸೋಲು: ಭಾರತದ ಸವಾಲು ಅಂತ್ಯ

HSA   ¦    Sep 14, 2018 04:56:19 PM (IST)
ಶ್ರೀಕಾಂತ್ ಗೆ ಕ್ವಾರ್ಟರ್ ಫೈನಲಿನಲ್ಲಿ ಸೋಲು: ಭಾರತದ ಸವಾಲು ಅಂತ್ಯ

ಟೋಕಿಯೋ: ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ ನ ಕ್ವಾರ್ಟರ್ ಫೈನಲಿನಲ್ಲಿ ಕೊರಿಯಾದ ಆಟಗಾರ ವಿರುದ್ಧ ಕಿದಂಬಿ ಶ್ರೀಕಾಂತ್ ಸೋಲುಂಡಿದ್ದು, ಭಾರತದ ಸವಾಲು ಅಂತ್ಯಗೊಂಡಿದೆ.

ಕ್ವಾರ್ಟರ್ ಫೈನಲಿನಲ್ಲಿ ಶ್ರೀಕಾಂತ್ ಕೊರಿಯಾದ ಲೀ ಡಾಂಗ್ ಕೆಯುನ್ ವಿರುದ್ಧ 21-19, 16-21, 18-21ರಿಂದ ಸೋಲುಂಡರು.

ಶ್ರೀಕಾಂತ್ ಸೋಲಿನಿಂದಾಗಿ ಜಪಾನ್ ಓಪನ್ ನಲ್ಲಿ ಭಾರತೀಯರ ಸವಾಲು ಅಂತ್ಯಕಂಡಿದೆ. ಮಹಿಳಾ ವಿಭಾಗದಲ್ಲಿ ಪಿ.ವಿ. ಸಿಂಧು ಅವರು ಎರಡನೇ ಸುತ್ತಿನಲ್ಲಿ ಸೋಲುಂಡು ನಿರ್ಗಮಿಸಿದ್ದರು.

ಎಚ್ ಎಸ್ ಪ್ರಣಯ್ ಫ್ರೀಕ್ವಾರ್ಟರ್ ಫೈನಲಿನಲ್ಲಿ ಇಂಡೋನೇಶಿಯಾದ ಅಂಥೋನಿ ಸಿನಿಸುಕ ಗಿಟಿಂಗ್ ವಿರುದ್ಧ 14-21, 17-20ರಿಂದ ಸೋಲುಂಡಿದ್ದರು.