ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್ ಐಆರ್ ಗೆ ಆದೇಶ

ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್ ಐಆರ್ ಗೆ ಆದೇಶ

HSA   ¦    Mar 22, 2018 02:05:52 PM (IST)
ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್ ಐಆರ್ ಗೆ ಆದೇಶ

ಜೋಧ್ ಪುರ: ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ವಿರುದ್ಧ ಟ್ವೀಟ್ ಮಾಡಿರುವ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್ ಐಆರ್ ದಾಖಲಿಸಿಕೊಳ್ಳುವಂತೆ ರಾಜಸ್ಥಾನ ಪೊಲೀಸರಿಗೆ ಜೋಧ್ ಪುರ ಕೋರ್ಟ್ ಸೂಚಿಸಿದೆ.

ಯಾವ ಅಂಬೇಡ್ಕರ್??? ತದ್ವಿರುದ್ಧ ಕಾನೂನನ್ನು, ಸಂವಿಧಾನವನ್ನು ಅಥವಾ ದೇಸದಲ್ಲಿ ಮೀಸಲಾತಿ ಎಂಬ ರೋವನ್ನು ಹರಡಿದವರೇ? ಎಂದು ಹಾರ್ದಿಕ್ ಪಾಂಡ್ಯ ಕಳೆದ ಡಿಸೆಂಬರ್ ನಲ್ಲಿ ಟ್ವೀಟ್ ಮಾಡಿದ್ದರು.

ರಾಜಸ್ಥಾನ ಜಿಲ್ಲೆಯ ರಾಷ್ಟ್ರೀಯ ಭೀಮಸೇನೆ ಸದಸ್ಯರು ಹಾಗೂ ವಕೀಲರು ಆಗಿರುವ ಡಿ.ಆರ್. ಮೇಘವಾಲ್ ಅವರು ಹಾರ್ದಿಕ್ ಪಾಂಡ್ಯ ವಿರುದ್ಧ ದೂರು ದಾಖಲಿಸಿದ್ದರು.