ಹೈದರಾಬಾದ್ ಗೆ ರೋಚಕ ಜಯ: ಹೊರಬಿದ್ದ ಆರ್ ಸಿಬಿ

ಹೈದರಾಬಾದ್ ಗೆ ರೋಚಕ ಜಯ: ಹೊರಬಿದ್ದ ಆರ್ ಸಿಬಿ

HSA   ¦    May 08, 2018 10:36:28 AM (IST)
ಹೈದರಾಬಾದ್ ಗೆ ರೋಚಕ ಜಯ: ಹೊರಬಿದ್ದ ಆರ್ ಸಿಬಿ

ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐದು ವಿಕೆಟ್ ರೋಚಕ ಗೆಲುವು ದಾಖಲಿಸಿದೆ.

ಗೆಲುವಿಗೆ 147 ರನ್ ಗಳ ಗುರಿಯನ್ನು ಪಡೆದಿದ್ದ ಬೆಂಗಳುರು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 141 ರನ್ ಮಾಡಲಷ್ಟೇ ಶಕ್ತವಾಯಿತು. ಕಾಲಿನ ಡೆ ಗ್ರ್ಯಾಂಡ್ ಹೋಮ್(33) ಮತ್ತು ಮನ್ ದೀಪ್ ಸಿಂಗ್ (21) ರನ್ ಮಾಡಿ ಅಂತ್ಯದಲ್ಲಿ ಭೀತಿ ಮೂಡಿಸಿದರೂ ಹೈದರಾಬಾದ್ ಕೈಯಿಂದ ಗೆಲುವು ಕಸಿಯಲು ಅವರಿಗೆ ಸಾಧ್ಯವಾಗಲಿಲ್ಲ.

10 ಪಂದ್ಯಗಳಲ್ಲಿ 7ನೇ ಸೋಲುಂಡಿರುವ ಆರ್ ಸಿಬಿಗೆ ಐಪಿಎಲ್ ನ ಮುಂದಿನ ಸುತ್ತಿಗೇರುವ ಬಾಗಿಲು ಮುಚ್ಚಿದೆ. ಸಣ್ಣ ಮೊತ್ತವನ್ನು ದಾಖಲಿಸಿದರೂ ಉತ್ತಮ ಬೌಲಿಂಗ್ ನಿಂದ ಹೈದರಾಬಾದ್ ಗೆಲುವು ತನ್ನದಾಗಿಸಿಕೊಂಡಿದೆ.
ಶಕಿಬ್ ಉಲ್ ಹಸನ್ ಎರಡು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಸಿದ್ದಾರ್ಥ ಕೌಲ್, ಸಂದೀಪ್ ಶರ್ಮಾ ಮತ್ತು ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಆರ್ ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಎಸ್ ಆರ್ ಎಚ್ ನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿತು. ಹೈದರಾಬಾದ್ ಬೌಲರ್ ಗಳಾದ ಮೊಹಮ್ಮದ್ ಸಿರಾಜ್(3/25), ಟಿಮ್ ಸೌಥಿ(3/30), ಉಮೇಶ್ ಯಾದವ್(1/36), ಯಜುವೇಂದ್ರ ಚಾಹಲ್(1/25) ಹೈದರಾಬಾದ್ ಬ್ಯಾಟ್ಸ್ ಮೆನ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಆದರೆ ಹೈದರಾಬಾದ್ ಕಪ್ತಾನ ವಿಲಿಯಮ್ಸನ್ 39 ಎಸೆತಗಳಲ್ಲಿ 56 ರನ್ ಬಾರಿಸಿ ತಂಡಕ್ಕೆ ಮಹತ್ವದ ದೇಣಿಗೆ ನೀಡಿದರು.