ವಿಶ್ವಕಪ್ ಫೈನಲ್ ಫಲಿತಾಂಶದ ರೀತಿ ಬಗ್ಗೆ ಇಂಗ್ಲೆಂಡ್ ಕಪ್ತಾನನಿಗೆ ನಿರಾಶೆ

ವಿಶ್ವಕಪ್ ಫೈನಲ್ ಫಲಿತಾಂಶದ ರೀತಿ ಬಗ್ಗೆ ಇಂಗ್ಲೆಂಡ್ ಕಪ್ತಾನನಿಗೆ ನಿರಾಶೆ

HSA   ¦    Jul 20, 2019 03:44:06 PM (IST)
ವಿಶ್ವಕಪ್ ಫೈನಲ್ ಫಲಿತಾಂಶದ ರೀತಿ ಬಗ್ಗೆ ಇಂಗ್ಲೆಂಡ್ ಕಪ್ತಾನನಿಗೆ ನಿರಾಶೆ

ಲಂಡನ್: ಈ ವರ್ಷದ ವಿಶ್ವಕಪ್ ಫೈನಲ್ ಅಂತ್ಯಗೊಂಡಿರುವ ರೀತಿ ಬಗ್ಗೆ ಇಂಗ್ಲೆಂಡ್ ಕಪ್ತಾನ ಇಯನ್ ಮೋರ್ಗನ್ ಅವರಿಗೆ ನಿರಾಶೆಯಾಗಿದೆ.

ನಿಗದಿತ ಅವಧಿಯಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಫೈನಲ್ ಪಂದ್ಯವು ಟೈ ಆದ ಬಳಿಕ ಸೂಪರ್ ಓವರ್ ನಲ್ಲೂ ಟೈ ಆಗಿತ್ತು. ಇದರ ಬಳಿಕ ಗರಿಷ್ಠ ಬೌಂಡರಿ ಬಾರಿಸಿದ ಆಧಾರದಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗಿತ್ತು.

ಎರಡು ತಂಡಗಳ ಮಧ್ಯೆ ಅಂತರವು ತುಂಬಾ ಕಡಿಮೆ ಇರುವಾಗ ಈ ರೀತಿಯ ಫಲಿತಾಂಶ ನಿಜವಾಗಿಯೂ ಸರಿಯಲ್ಲ. ನಿಜವಾಗಿಯೂ ಇದು ಪಂದ್ಯದ ಮೇಲೆ ಪರಿಣಾಮ ಬೀರಲಿದೆ ಎನ್ನುವ ಒಂದು ಕ್ಷಣವೂ ಅಲ್ಲಿರಲಿಲ್ಲ ಎಂದು ಮೋರ್ಗನ್ ತಿಳಿಸಿದರು.

ಇದು ವಿಶ್ವಕಪ್ ನ ಅತೀ ಶ್ರೇಷ್ಠ ಫೈನಲ್ ಎಂದು ಪರಿಗಣಿಸಲಾಗಿದೆ ಮತ್ತು ಇದುವರೆಗಿನ ಶ್ರೇಷ್ಠ ಏಕದಿನ ಕೂಡ. ಯಾಕೆಂದರೆ ಇಲ್ಲಿ ವಿಜೇತರನ್ನು ನಿರ್ಧರಿಸಲು ತುಂಬಾ ಕಷ್ಟಪಡಬೇಕಾಯಿತು. ಆದರೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸೋಲನ್ನು ಸ್ವೀಕರಿಸಿರುವುದು ತುಂಬಾ ಪ್ರಶಂಸೆಗೆ ಗುರಿಯಾಗಿದೆ.

ಅಲ್ಲಿ ಏನಾದರೂ ನಡೆದಿದೆ. ಏನು ನಡೆದಿದೆ ಎನ್ನಲು ಸಾಧ್ಯವಾಗುತ್ತಿಲ್ಲ. ಪಂದ್ಯವು ಎಲ್ಲಿ ಗೆದ್ದಿದೆ ಮತ್ತು ಸೋತಿದೆ ಎಂದು ಹೇಳಲಾಗುತ್ತಿಲ್ಲ ಎಂದರು.