ಎರಡನೇ ಸುತ್ತಿನಲ್ಲಿ ಸಿಂಧು ನಿರ್ಗಮನ: ಶ್ರೀಕಾಂತ್ ಕ್ವಾರ್ಟರ್ ಫೈನಲಿಗೆ

ಎರಡನೇ ಸುತ್ತಿನಲ್ಲಿ ಸಿಂಧು ನಿರ್ಗಮನ: ಶ್ರೀಕಾಂತ್ ಕ್ವಾರ್ಟರ್ ಫೈನಲಿಗೆ

HSA   ¦    Sep 13, 2018 06:44:58 PM (IST)
ಎರಡನೇ ಸುತ್ತಿನಲ್ಲಿ ಸಿಂಧು ನಿರ್ಗಮನ: ಶ್ರೀಕಾಂತ್ ಕ್ವಾರ್ಟರ್ ಫೈನಲಿಗೆ

ಟೊಕಿಯೋ: ಭಾರತದ ಶಟ್ಲರ್ ಪಿ.ವಿ. ಸಿಂಧು ಅವರು ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ ನ ಎರಡನೇ ಸುತ್ತಿನಲ್ಲೇ ಸೋಲುಂಡು ನಿರ್ಗಮಿಸಿದರು.

ಸಿಂಧು ಅವರು ಎರಡನೇ ಸುತ್ತಿನಲ್ಲಿ ಚೀನಾದ ಗಾವೋ ಫ್ಯಾಂಜಿಯಿ ವಿರುದ್ಧ 18-21, 19-21ರ ನೇರ ಸೆಟ್ ಗಳಿಂದ ಸೋಲುಂಡರು. ಏಶ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿರುವ ಸಿಂಧು ಆರಂಭಿಕ ಹಂತದಲ್ಲೇ ಸೋಲುಂಡು ನಿರಾಶೆ ಮೂಡಿಸಿದ್ದಾರೆ.

ಆದರೆ ಪುರುಷರ ವಿಭಾಗದಲ್ಲಿ ವಿಶ್ವದ ನಂಬರ್ 8 ಆಟಗಾರ ಕಿದಂಬಿ ಶ್ರೀಕಾಂತ್ ಅವರು ಕ್ವಾರ್ಟರ್ ಫೈನಲಿಗೇರಿದ್ದಾರೆ. ಶ್ರೀಕಾಂತ್ 21-15 ಮತ್ತು 21-14ರಿಂದ ಹಾಂಗ್ ಕಾಂಗ್ ನ ವಿನ್ಸೆಂಟ್ ವಾಂಗ್ ವಿರುದ್ಧ ಗೆಲುವು ದಾಖಲಿಸಿಕೊಂಡರು. ಏಶ್ಯನ್ ಗೇಮ್ಸ್ ನ ಎರಡನೇ ಸುತ್ತಿನಲ್ಲಿ ವಾಂಗ್ ವಿರುದ್ಧ ಸೋಲುಂಡಿದ್ದ ಶ್ರೀಕಾಂತ್ ಸೇಡು ತೀರಿಸಿಕೊಂಡಿದ್ದಾರೆ.

ಶ್ರೀಕಾಂತ್ ಶುಕ್ರವಾರ ನಡೆಯಲಿರುವ ಕ್ವಾರ್ಟರ್ ಫೈನಲಿನಲ್ಲಿ ಲೀ ಡಾಂಗ್ ಕೆಯುನ್ ವಿರುದ್ಧ ಆಡಲಿದ್ದಾರೆ.