ಮೊದಲು ಆಟಗಾರರಿಗೆ ಶಿಸ್ತು ಕಲಿಸಿ: ಪಾಕ್ ಗೆ ಬಿಸಿಸಿಐ ಖಡಕ್ ಸೂಚನೆ

ಮೊದಲು ಆಟಗಾರರಿಗೆ ಶಿಸ್ತು ಕಲಿಸಿ: ಪಾಕ್ ಗೆ ಬಿಸಿಸಿಐ ಖಡಕ್ ಸೂಚನೆ

HSA   ¦    Apr 24, 2018 06:40:10 PM (IST)
ಮೊದಲು ಆಟಗಾರರಿಗೆ ಶಿಸ್ತು ಕಲಿಸಿ: ಪಾಕ್ ಗೆ ಬಿಸಿಸಿಐ ಖಡಕ್ ಸೂಚನೆ

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಭಾರತದೊಂದಿಗೆ ಯಾವುದೇ ತಟಸ್ಥ ಸ್ಥಳದಲ್ಲಿ ಆಡಲು ತಯಾರಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ನ ಸಭೆಯಲ್ಲಿ ತಿಳಿಸಿದ್ದು, ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ.

ಮೊದಲು ನಿಮ್ಮ ಆಟಗಾರರನ್ನು ಹದ್ದುಬಸ್ತಿನಲ್ಲಿ, ಇಟ್ಟುಕೊಳ್ಳಲು ಕಲಿಯಿರಿ. ಆ ಬಳಿಕ ದ್ವಿಪಕ್ಷೀಯ ಕ್ರಿಕೆಟ್ ಬಗ್ಗೆ ಮಾತನಾಡುವ ಎಂದು ಬಿಸಿಸಿಐ ಅಧಿಕಾರಿಯು ಖಡಕ್ ಆಗಿ ಉತ್ತರಿಸಿದ್ದಾರೆ ಎಂದು ತಿಳಿದುಬಂದಿದೆ.

ಐಸಿಸಿಯ ಸಭೆಯಲ್ಲಿ ಪಿಸಿಬಿಯ ಕಾರ್ಯಾಧ್ಯಕ್ಷ ನಜಮ್ ಸೇಥಿ ಅವರು ದ್ವಿಪಕ್ಷೀಯ ಕ್ರಿಕೆಟ್ ಸರಣಿಗೆ ಪಾಕಿಸ್ತಾನ ತಯಾರಾಗಿದ್ದರೂ ಭಾರತವೇ ಇದಕ್ಕೆ ಸಮ್ಮತಿ ಸೂಚಿಸುತ್ತಿಲ್ಲವೆಂದು ಆರೋಪಿಸಿದರು. ಈ ವೇಳೆ ಬಿಸಿಸಿಐ ಅಧಿಕಾರಿಯು, ನಿಮ್ಮ ಆಟಗಾರರು ಮೊದಲು ನೆರೆಯ ದೇಶಕ್ಕೆ ಗೌರವ ಸೂಚಿಸುವುದನ್ನು ಕಲಿಯಲಿ. ಆ ಬಳಿಕ ಕ್ರಿಕೆಟ್ ಸರಣಿ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಪಾಕಿಸ್ತಾನದ ವೇಗಿ ಹಸನ್ ಅಲಿ, ವಾಘಾ ಗಡಿಯಲ್ಲಿ ಭಾರತದ ಧ್ವಜ ಕೆಳಗಿಳಿಸುತ್ತಿದ್ದ ವೇಳೆ ಅಲ್ಲಿಗೆ ಪ್ರೇಕ್ಷಕನಾಗಿ ಆಗಮಿಸಿ ತುಂಬಾ ಅನಾಗರಿಕನಂತೆ ವರ್ತಿಸಿದ್ದರು.

ಇದಕ್ಕೆ ಮೊದಲು ಪಾಕ್ ಕ್ರಿಕೆಟಿಗ ಶಹೀದ್ ಅಫ್ರಿದಿ ಅವರು ಕಾಶ್ಮೀರದಲ್ಲಿ ಭಾರತೀಯ ಸೇನೆ ಯುವಕರನ್ನು ಹತ್ಯೆಗೈಯುತ್ತಿದೆ ಎಂದು ಹೇಳಿದ್ದರು.