ಮಸೀದಿಗಳ ಮೇಲೆ ದಾಳಿ: ನ್ಯೂಜಿಲೆಂಡ್ ಪ್ರವಾಸ ಮೊಟಕುಗೊಳಿಸಿದ ಬಾಂಗ್ಲಾ

ಮಸೀದಿಗಳ ಮೇಲೆ ದಾಳಿ: ನ್ಯೂಜಿಲೆಂಡ್ ಪ್ರವಾಸ ಮೊಟಕುಗೊಳಿಸಿದ ಬಾಂಗ್ಲಾ

HSA   ¦    Mar 15, 2019 03:48:52 PM (IST)
ಮಸೀದಿಗಳ ಮೇಲೆ ದಾಳಿ: ನ್ಯೂಜಿಲೆಂಡ್ ಪ್ರವಾಸ ಮೊಟಕುಗೊಳಿಸಿದ ಬಾಂಗ್ಲಾ

ಕ್ರಿಸ್ಟ್ ಚರ್ಚ್: ಮಸೀದಿಗಳಲ್ಲಿ ನಡೆದಿರುವಂತಹ ಗುಂಡಿನ ದಾಳಿ ಬಳಿಕ ಬಾಂಗ್ಲಾದೇಶ ತಂಡ ನ್ಯೂಜಿಲೆಂಡ್ ಪ್ರವಾಸವನ್ನು ಮೊಟಕುಗೊಳಿಸಿ, ತವರಿಗೆ ಮರಳಲಿದೆ.

ಶುಕ್ರವಾರ ಕ್ರಿಸ್ಟ್ ಚರ್ಚ್ ನ ಎರಡು ಮಸೀದಿಗಳಲ್ಲಿ ಆಗಂತುಕರು ನಡೆಸಿದ ಗುಂಡಿನ ದಾಳಿಯಿಂದಾಗಿ ಸುಮಾರು 49 ಮಂದಿ ಮೃತಪಟ್ಟಿದ್ದರು.

ಶನಿವಾರದಿಂದ ಹ್ಯಾಗ್ಲಿ ಓವಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯವನ್ನು ಆಡಬೇಕಿತ್ತು.

ದಾಳಿ ವೇಳೆ ಬಾಂಗ್ಲಾದೇಶ ಕ್ರಿಕೆಟಿಗರು ಸ್ವಲ್ಪದರಲ್ಲಿಯೇ ಪಾರಾದರು ಎಂದು ಹೇಳಲಾಗಿದೆ. ದಾಳಿಯಿಂದ ಪಾರಾದ ಬಗ್ಗೆ ತಮಿಮ್ ಇಕ್ಬಾಲ್ ಟ್ವೀಟ್ ಮಾಡಿದ್ದಾರೆ.