ಕೊಹ್ಲಿಗೆ ಶತಕ ಬಾರಿಸುವುದು ಅನಿವಾರ್ಯವಾಗಿತ್ತು: ಭುವನೇಶ್ವರ್ ಕುಮಾರ್

ಕೊಹ್ಲಿಗೆ ಶತಕ ಬಾರಿಸುವುದು ಅನಿವಾರ್ಯವಾಗಿತ್ತು: ಭುವನೇಶ್ವರ್ ಕುಮಾರ್

HSA   ¦    Aug 12, 2019 03:15:44 PM (IST)
ಕೊಹ್ಲಿಗೆ ಶತಕ ಬಾರಿಸುವುದು ಅನಿವಾರ್ಯವಾಗಿತ್ತು: ಭುವನೇಶ್ವರ್ ಕುಮಾರ್

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಶತಕ ಬಾರಿಸುವುದು ತುಂಬಾ ಅನಿವಾರ್ಯವಾಗಿತ್ತು ಎಂದು ವೇಗಿ ಭುವನೇಶ್ವರ್ ಕುಮಾರ್ ಅವರು ಹೇಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ನಿನ್ನೆ ನಡೆದ ಮಳೆಬಾಧಿತ ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿದ್ದು, ಟೀಂ ಇಂಡಿಯಾ 59 ರನ್ ಗೆಲುವು ದಾಖಲಿಸಿಕೊಂಡಿದೆ.

ವಿಶ್ವಕಪ್ ನಲ್ಲಿ ಒಂದೂ ಶತಕವನ್ನು ಬಾರಿಸದೆ ಇದ್ದ ಕೊಹ್ಲಿ ಏಕದಿನದಲ್ಲಿ ಸೌರವ್ ಗಂಗೂಲಿ ಅವರ ದಾಖಲೆ ಹಿಂದಿಕ್ಕಿದ್ದಾರೆ.

ಕೊಹ್ಲಿ ಅವರಿಗೆ ಶತಕ ಅನಿವಾರ್ಯವಾಗಿತ್ತು. ಇದು ಅವರು ಸಂಭ್ರಮಾಚರಿಸಿದ ರೀತಿಯಿಂದ ತಿಳಿಯುತ್ತದೆ. ಅವರು ಯಾವಾಗಲೂ 70-80 ರನ್ ಬಾರಿಸಿದ ಔಟಾಗುತ್ತಿದ್ದರು. ಅವರು ಯಾವಾಗಲೂ ರನ್ ಬಾರಿಸಲು ಬಯಸುತ್ತಿದ್ದರು ಎಂದು ಭುವನೇಶ್ವರ್ ಕುಮಾರ್ ಹೇಳಿದರು.