ಲಂಕಾ ಸೋಲು ತಪ್ಪಿಸಿದ ಧನಂಜಯ: ಭಾರತಕ್ಕೆ ಸರಣಿ ಗೆಲುವು

ಲಂಕಾ ಸೋಲು ತಪ್ಪಿಸಿದ ಧನಂಜಯ: ಭಾರತಕ್ಕೆ ಸರಣಿ ಗೆಲುವು

HSA   ¦    Dec 06, 2017 05:50:15 PM (IST)
ಲಂಕಾ ಸೋಲು ತಪ್ಪಿಸಿದ ಧನಂಜಯ: ಭಾರತಕ್ಕೆ ಸರಣಿ ಗೆಲುವು

ನವದೆಹಲಿ: ಶ್ರೀಲಂಕಾ ಯುವ ಬ್ಯಾಟ್ಸ್ ಮೆನ್ ಗಳು ತೋರಿಸಿದ ದಿಟ್ಟೆದೆಯ ಬ್ಯಾಟಿಂಗ್ ನೆರವಿನಿಂದ ಮೂರನೇ ಹಾಗೂ ಅಂತಿಮ ಟೆಸ್ಟ್ ಡ್ರಾ ಮಾಡಿಕೊಂಡಿದ್ದು, ಭಾರತವು 1-0ಯಿಂದ ಸರಣಿ ಗೆದ್ದುಕೊಂಡಿದೆ.

ಧನಂಜಯ ಡಿಸಿಲ್ವಾ ಬಾರಿಸಿದ ಶತಕದಿಂದ ಸ್ಪೂರ್ತಿ ಪಡೆದುಕೊಂಡು ಲಂಕಾದ ಬ್ಯಾಟ್ಸ್ ಮೆನ್ ಗಳು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. 410 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಟ್ಟುತ್ತಿದ್ದ ಲಂಕಾ ಐದು ವಿಕೆಟ್ ಕಳಕೊಂಡು 299 ರನ್ ಮಾಡಿತು.

ಮೂರನೇ ಶತಕ ಬಾರಿಸಿದ ಧನಂಜಯ್ ಡಿಸಿಲ್ವಾ 119 ರನ್ ಮಾಡಿ ಗಾಯಾಳುವಾಗಿ ನಿವೃತ್ತರಾದರು. ಇದರ ಬಳಿಕ ರೋಶೆನ್ ಸಿಲ್ವಾ ಔಟಾಗದೆ 74 ಮತ್ತು ನಿರೊಶನ್ ಡಿಕ್ವೆಲ್ ಔಟಾಗದೆ 44 ರನ್ ಮಾಡಿ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.

ರೊಶೆನ್ ಮತ್ತು ಡಿಕ್ವೆಲ್ ಜೋಡಿಯು ಮುರಿಯದ ಆರನೇ ವಿಕೆಟಿಗೆ 94 ರನ್ ಗಳ ಜತೆಯಾಟ ನಡೆಸಿ ಭಾರತದ ಗೆಲುವಿನಾಸೆಯನ್ನು ನುಚ್ಚುನೂರು ಮಾಡಿದರು. ನಾಗ್ಪುರದಲ್ಲಿ ಗೆಲುವು ಪಡೆದಿದ್ದ ಭಾರತ 1-0 ಸರಣಿ ಗೆಲುವು ಸಾಧಿಸಿತು.