ಹಾಕಿ ಪಂದ್ಯಗಳನ್ನು ಹುಲ್ಲಿನ ಮೇಲ್ಮೈ ಮೈದಾನಗಳಲ್ಲಿ ನಡೆಸಲು ಚಿಂತನೆ

ಹಾಕಿ ಪಂದ್ಯಗಳನ್ನು ಹುಲ್ಲಿನ ಮೇಲ್ಮೈ ಮೈದಾನಗಳಲ್ಲಿ ನಡೆಸಲು ಚಿಂತನೆ

HSA   ¦    Nov 03, 2018 03:44:24 PM (IST)
ಹಾಕಿ ಪಂದ್ಯಗಳನ್ನು ಹುಲ್ಲಿನ ಮೇಲ್ಮೈ ಮೈದಾನಗಳಲ್ಲಿ ನಡೆಸಲು ಚಿಂತನೆ

ನವದೆಹಲಿ: ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್ಐಎಚ್) ಮತ್ತೆ ಹುಲ್ಲಿನ ಮೇಲ್ಮೈಯ ಮೈದಾನಗಳಲ್ಲಿ ಪಂದ್ಯಗಳನ್ನು ನಡೆಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.

ಈಗ ಹಾಕಿ ಪಂದ್ಯಗಳು ಸಿಂಥೆಟಿಕ್ ಮೇಲ್ಮೈ ಹೊಂದಿರುವ ಮೈದಾನಗಳಲ್ಲಿ ಆಡಿಸಲಾಗುತ್ತಿದೆ. ಆದರೆ 2021ರಲ್ಲಿ ನಡೆಯಲಿರುವ ದ್ವಿತೀಯ ದರ್ಜೆ ತಂಡಗಳ ಹಾಕಿ ಸಿರೀಸ್ ಓಪನ್ ಟೂರ್ನಮೆಂಟ್ ನಲ್ಲಿ ಇದನ್ನು ಅಳವಡಿಸಿಕೊಳ್ಳಲಾಗುವುದು. ಇದರ ಬಳಿಕ 2024ರ ಒಲಿಂಪಿಕ್ಸ್ ನ ಅರ್ಹತಾ ಸುತ್ತಿನ ಟೂರ್ನಿಯಲ್ಲೂ ಇದನ್ನು ಅಳವಡಿಸುತ್ತೇವೆ ಎಂದು ಎಫ್ ಐಎಚ್ ಸಿಇಒ ಥೆರ್ರಿ ವೆಯಿಲ್ ತಿಳಿಸಿದರು.

ಪ್ಯಾರಿಸ್ ಒಲಿಂಪಿಕ್ಸ್ ಗೆ ಹೆಚ್ಚಿನ ತಂಡಗಳು ಅರ್ಹತೆ ಪಡೆಯಬೇಕೆನ್ನುವುದು ನಮ್ಮ ಉದ್ದೇಶ. ಆದರೆ ಪ್ರಸಕ್ತವಾಗಿ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಪಂದ್ಯಗಳು ಸಿಂಥೆಟಿಕ್ ಮೇಲ್ಮೈ ಮೈದಾನದಲ್ಲೇ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.