ಪಾಂಡ್ಯ, ರಾಹುಲ್ ಬದಲಿಗೆ ವಿಜಯ್ ಶಂಕರ್ ಮತ್ತು ಶುಬಮನ್ ಗಿಲ್

ಪಾಂಡ್ಯ, ರಾಹುಲ್ ಬದಲಿಗೆ ವಿಜಯ್ ಶಂಕರ್ ಮತ್ತು ಶುಬಮನ್ ಗಿಲ್

HSA   ¦    Jan 13, 2019 10:04:22 AM (IST)
ಪಾಂಡ್ಯ, ರಾಹುಲ್ ಬದಲಿಗೆ ವಿಜಯ್ ಶಂಕರ್ ಮತ್ತು ಶುಬಮನ್ ಗಿಲ್

ಸಿಡ್ನಿ: ಟಿವಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಬಗ್ಗೆ ತುಂಬಾ ಆಕ್ಷೇಪಾರ್ಹವಾಗಿ ಮಾತನಾಡಿ ತಂಡದಿಂದ ಹೊರಬಿದ್ದಿರುವ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಬದಲಿಗೆ ಆಲ್ ರೌಂಡರ್ ವಿಜಯ್ ಶಂಕರ್ ಹಾಗೂ ಬ್ಯಾಟ್ಸ್ ಮೆನ್ ಶುಬಮನ್ ಗಿಲ್ ಗೆ ಸ್ಥಾನ ನೀಡಲಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಪಾಂಡ್ಯ ಮತ್ತು ರಾಹುಲ್ ಗೆ ಅವಕಾಶ ನೀಡಿರಲಿಲ್ಲ. ತನಿಖೆ ಪೂರ್ಣಗೊಳ್ಳುವ ತನಕ ಅವರನ್ನು ತಂಡದಿಂದ ಅಮಾನತುಗೊಳಿಸಲಾಗಿದೆ.

ಆಸ್ಟ್ರೇಲಿಯಾ ಏಕದಿನ ಸರಣಿ ಮತ್ತು ನ್ಯೂಜಿಲೆಂಡ್ ಪ್ರವಾಸಕ್ಕೆ ವಿಜಯ್ ಶಂಕರ್ ಮತ್ತು ಶುಬಮನ್ ಗಿಲ್ ಗೆ ಅವಕಾಶ ನೀಡಲಾಗಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪಾಂಡ್ಯ ಮತ್ತು ರಾಹುಲ್ ಅವರು ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.