ರಾಜನ ಧಿರಿಸಿನಲ್ಲಿರುವ ಕೊಹ್ಲಿ ಫೋಟೊ ಹಾಕಿದ ಐಸಿಸಿ

ರಾಜನ ಧಿರಿಸಿನಲ್ಲಿರುವ ಕೊಹ್ಲಿ ಫೋಟೊ ಹಾಕಿದ ಐಸಿಸಿ

HSA   ¦    Jun 06, 2019 02:52:39 PM (IST)
ರಾಜನ ಧಿರಿಸಿನಲ್ಲಿರುವ ಕೊಹ್ಲಿ ಫೋಟೊ ಹಾಕಿದ ಐಸಿಸಿ

ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನ ಸಾಮಾಜಿಕ ಜಾಲತಾಣವನ್ನು ನಿರ್ವಹಿಸುವ ಘಟಕವು ಟೀಂ ಇಂಡಿಯಾದ ಕಪ್ತಾನ ವಿರಾಟ್ ಕೊಹ್ಲಿ ರಾಜ ಧಿರಿಸಿನಲ್ಲಿರುವ ಫೋಟೊ ಹಾಕಿದೆ.

ಈ ಅನಿಮೇಟೆಡ್ ಫೋಟೊ ಹಾಕಿರುವುದಕ್ಕೆ ಕೆಲವು ಮಂದಿ ತುಂಬಾ ಪ್ರಶಂಸೆ ಮಾಡಿದ್ದರೆ ಇನ್ನು ಕೆಲವರು ಇದಕ್ಕೆ ಟೀಕೆ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ಮಾಜಿ ಕಪ್ತಾನ ಮೈಕಲ್ ವಾವನ್ ಅವರ ಸಹಿತ ಹಲವಾರು ಮಂದಿ ಮಾಜಿ ಕ್ರಿಕೆಟಿಗರು ಇದಕ್ಕೆ ಪರ ಹಾಗೂ ವಿರೋಧ ವ್ಯಕ್ತಪಡಿಸಿರುವರು.

ಏಕದಿನ ಹಾಗೂ ಟೆಸ್ಟ್ ಕ್ರಿಕೆಟಿನಲ್ಲಿ ವಿಶ್ವದ ನಂಬರ್ ವನ್ ಆಟಗಾರನಾಗಿರುವ ವಿರಾಟ್ ಕೊಹ್ಲಿಗೆ ಸಲ್ಲಿಸಿದ ಗೌರವ ಇದಾಗಿದೆ ಎಂದು ಐಸಿಸಿ ತನ್ನನ್ನು ತಾನು ಸಮರ್ಥಿಸಿಕೊಂಡಿದೆ.