ಧೋನಿ ದೇಶಪ್ರೇಮಕ್ಕೆ ಟ್ವಿಟ್ಟರ್ ನಲ್ಲಿ ಭಾರೀ ಪ್ರಶಂಸೆ

ಧೋನಿ ದೇಶಪ್ರೇಮಕ್ಕೆ ಟ್ವಿಟ್ಟರ್ ನಲ್ಲಿ ಭಾರೀ ಪ್ರಶಂಸೆ

HSA   ¦    Feb 11, 2019 04:09:40 PM (IST)
ಧೋನಿ ದೇಶಪ್ರೇಮಕ್ಕೆ ಟ್ವಿಟ್ಟರ್ ನಲ್ಲಿ ಭಾರೀ ಪ್ರಶಂಸೆ

ವೆಲ್ಲಿಂಗ್ಟನ್: ಅಭಿಯಾನಿಯೊಬ್ಬ ಮೈದಾನಕ್ಕೆ ಬೀಳಿಸಿದ ತ್ರಿವರ್ಣ ಧ್ವಜವನ್ನು ಟೀಂ ಇಂಡಿಯಾ ಆಟಗಾರ ಎಂ.ಎಸ್. ಧೋನಿ ಎತ್ತಿ ಹಿಡಿದು ರಾಷ್ಟ್ರಪ್ರೇಮ ಮರೆದಿರುವ ಫೋಟೊ ಈಗ ವೈರಲ್ ಆಗಿದೆ.

ಭಾನುವಾರ ನಡೆದ ಟಿ-20 ಪಂದ್ಯದಲ್ಲಿ ಅಭಿಮಾನಿಯೊಬ್ಬ ಭದ್ರತಾ ವ್ಯವಸ್ಥೆಯನ್ನು ಭೇದಿಸಿ, ಟೀಂ ಇಂಡಿಯಾ ಆಟಗಾರ ಎಂಎಸ್ ಧೋನಿ ಅವರನ್ನು ಭೇಟಿಯಾಗಲು ಬಂದಿದ್ದ ವೇಳೆ ಕೈಯಲ್ಲಿದ್ದ ಭಾರತದ ಧ್ವಜವನ್ನು ನೆಲಕ್ಕೆ ಹಾಕಿದ್ದು, ಧೋನಿ ಮೊದಲು ಧ್ವಜವನ್ನು ಎತ್ತಿರುವುದು ಈಗ ಟ್ವಿಟ್ಟರ್ ನಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗಿದೆ.

ಧೋನಿಯ ದೇಶಪ್ರಮದ ಫೋಟೊ ಈಗ ಟ್ವಿಟ್ಟರ್ ನಲ್ಲಿ ಭಾರೀ ಸದ್ದು ಮಾಡಿದೆ. ಕ್ರಿಕೆಟ್ ಅಭಿಮಾನಿಗಳು ಹಾಗೂ ಟ್ವಿಟ್ಟರಿಗರು ಧೋನಿಗೆ ಒಂದು ಸೆಲ್ಯೂಟ್ ಹೊಡೆದಿದ್ದಾರೆ.