ಆಸೀಸ್ ವಿರುದ್ಧ ಸೋಲುಂಡ ಇಂಗ್ಲೆಂಡ್ ನಾಲ್ಕನೇ ಸ್ಥಾನಕ್ಕೆ ಕುಸಿತ

ಆಸೀಸ್ ವಿರುದ್ಧ ಸೋಲುಂಡ ಇಂಗ್ಲೆಂಡ್ ನಾಲ್ಕನೇ ಸ್ಥಾನಕ್ಕೆ ಕುಸಿತ

HSA   ¦    Jun 26, 2019 09:02:20 AM (IST)
ಆಸೀಸ್ ವಿರುದ್ಧ ಸೋಲುಂಡ ಇಂಗ್ಲೆಂಡ್ ನಾಲ್ಕನೇ ಸ್ಥಾನಕ್ಕೆ ಕುಸಿತ

ಲಾರ್ಡ್ಸ್: ವಿಶ್ವಕಪ್ ನ ಫೇವರಿಟ್ ತಂಡವೆಂದು ಪರಿಗಣಿಸಲ್ಪಟ್ಟಿರುವ ಆತಿಥೇಯ ಇಂಗ್ಲೆಂಡ್ ಮಂಗಳವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 64 ರನ್ ಗಳಿಂದ ಸೋಲುಂಡಿದೆ.

ಈ ಸೋಲಿನಿಂದ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

289 ರನ್ ಗಳ ಗೆಲುವಿನ ಬೆನ್ನಟ್ಟುತ್ತಿದ್ದ ಇಂಗ್ಲೆಂಡ್ ಆರಂಭದಲ್ಲೇ ವಿಕೆಟ್ ಕಳಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಬೆನ್ ಸ್ಟೋಕ್ಸ್ 115 ಎಸೆತಗಳಲ್ಲಿ 89 ರನ್ ಸಿಡಿಸಿ ಗೆಲುವಿನಾಸೆ ಮೂಡಿಸಿದರು. ಅವರು ಎರಡು ಸಿಕ್ಸರ್ ಮತ್ತು ಎಂಟು ಬೌಂಡರಿ ಬಾರಿಸಿದರು.

ಆಸ್ಟ್ರೇಲಿಯಾದ ವೇಗಿ ಜಾಸನ್ ಬೆರ್ಹೆನಡೊಫ್ ಐದು ವಿಕೆಟ್ ಉರುಳಿಸಿ ಆಸೀಸ್ ಗೆ ಆಘಾತವಿಕ್ಕಿದರು. ಇಂಗ್ಲೆಂಡ್ 45ನೇ ಓವರ್ ನಲ್ಲಿ 221 ರನ್ ಗಳಿಗೆ ಆಲೌಟ್ ಆಯಿತು.

ಆಸ್ಟ್ರೇಲಿಯಾ ಏಳು ಪಂದ್ಯಗಳಿಂದ ಆರನೇ ಗೆಲುವು ದಾಖಲಿಸಿಕೊಂಡಿದೆ. ಲೀಗ್ ಹಂತದಿಂದ ಅಗ್ರ ನಾಲ್ಕು ತಂಡಗಳು ಸೆಮಿಫೈನಲಿಗೇರಲಿದೆ.

ಆಸ್ಟ್ರೇಲಿಯಾಗೆ ಆರಂಭಿಕ ಅರೋನ್ ಪಿಂಚ್ ಮತ್ತು ಡೇವಿಡ್ ವಾರ್ನರ್ ಉತ್ತಮ ಆರಂಭ ಒದಗಿಸಿಕೊಟ್ಟರು. ಇವರಿಬ್ಬರು 123 ರನ್ ಗಳ ಜತೆಯಾಟ ನಡೆಸಿದರು.

ವಾರ್ನರ್ 53 ರನ್ ಬಾರಿಸಿದರು. ಇದರ ಬಳಿಕ ಬಂದ ಉಸ್ಮಾನ್ ಖ್ವಾಜಾ 23 ರನ್ ಬಾರಿ ನಿರ್ಗಮಿಸಿದರು. ಆದರೆ ಪಿಂಚ್ ಶತಕ ಬಾರಿಸಿ ತಂಡದ ಹೋರಾಟಕಾರಿ ಮೊತ್ತಕ್ಕೆ ನೆರವಾದರು.