ಹತ್ತು ವರ್ಷ ಹಳೆಯ ಕೊಹ್ಲಿ ದಾಖಲೆ ಮುರಿದ ಶುಬ್ಮನ್ ಗಿಲ್

ಹತ್ತು ವರ್ಷ ಹಳೆಯ ಕೊಹ್ಲಿ ದಾಖಲೆ ಮುರಿದ ಶುಬ್ಮನ್ ಗಿಲ್

HSA   ¦    Nov 04, 2019 05:11:42 PM (IST)
ಹತ್ತು ವರ್ಷ ಹಳೆಯ ಕೊಹ್ಲಿ ದಾಖಲೆ ಮುರಿದ ಶುಬ್ಮನ್ ಗಿಲ್

ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ಹತ್ತು ವರ್ಷಗಳ ಹಳೆಯ ದಾಖಲೆಯನ್ನು ಶುಬ್ಮನ್ ಗಿಲ್ ಅವರು ಮುರಿದಿದ್ದಾರೆ.

ಶುಬ್ಮನ್ ಗಿಲ್  ಭಾರತ ಸಿ ತಂಡವನ್ನು ದೇವಧಾರ್ ಟ್ರೋಫಿಯಲ್ಲಿ ಫೈನಲಿಗೇರಿಸಿದ ಅತೀ ಕಿರಿಯ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಗಿಲ್ ತಂಡವನ್ನು ಫೈನಲಿಗೇರಿಸುವ ವೇಳೆ ಅವರ ವಯಸ್ಸು 20 ವರ್ಷ ಮತ್ತು 57 ದಿನಗಳು. ಇದಕ್ಕೆ ಮೊದಲು ಕೊಹ್ಲಿ ಅವರು 2009ರಲ್ಲಿ ದೇವಧಾರ್ ಟ್ರೋಫಿಯಲ್ಲಿ ಉತ್ತರ ವಲಯ ತಂಡವನ್ನು ಮುನ್ನಡೆಸಿದ್ದು. ಈ ವೇಳೆ ಅವರಿಗೆ 21 ವರ್ಷ ಮತ್ತು 142 ದಿನಗಳು ಆಗಿತ್ತು.