ಪ್ಯಾರಾ ಒಲಿಂಪಿಕ್ ಬೆಳ್ಳಿ ವಿಜೇತ ಗಿರೀಶ್ ಗೆ ನಿಶ್ಚಿತಾರ್ಥ

ಪ್ಯಾರಾ ಒಲಿಂಪಿಕ್ ಬೆಳ್ಳಿ ವಿಜೇತ ಗಿರೀಶ್ ಗೆ ನಿಶ್ಚಿತಾರ್ಥ

Oct 22, 2017 03:01:17 PM (IST)
ಪ್ಯಾರಾ ಒಲಿಂಪಿಕ್ ಬೆಳ್ಳಿ ವಿಜೇತ ಗಿರೀಶ್ ಗೆ ನಿಶ್ಚಿತಾರ್ಥ

ಹಾಸನ: ಪ್ಯಾರಾ ಒಲಿಂಪಿಕ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಕರ್ನಾಟಕದ ಹೆಮ್ಮೆಯ ಕುವರ ಎಚ್.ಎನ್. ಗಿರೀಶ್ ಅವರು ಭಾನುವಾರ ನಿಶ್ಚಿತಾರ್ಥ ಮಾಡಿಕೊಂಡರು.

ಮೈಸೂರಿನ ಸಹನಾ ಎಂಬ ಹುಡುಗಿಯ ಜತೆಗೆ ಗಿರೀಶ್ ನಿಶ್ಚಿತಾರ್ಥ ಸಮಾರಂಭವು ಹಾಸನದ ತನ್ವಿ ತ್ರಿಶಾ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಲಂಡನ್ ನಲ್ಲಿ 2012ರಲ್ಲಿ ನಡೆದ ಪ್ಯಾರಾ ಒಲಿಂಪಿಕ್ ನ ಎತ್ತರ ಜಿಗಿತ ವಿಭಾಗದಲ್ಲಿ ಗಿರೀಶ್ 1.74 ಮೀ. ಎತ್ತರಕ್ಕೆ ಜಿಗಿದು ಬೆಳ್ಳಿ ಪದಕ ಗೆದ್ದಿದ್ದರು. ಈ ಸಾಧನೆ ಮಾಡಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಗಿರೀಶ್ ಪಾತ್ರರಾಗಿದ್ದರು.

ಗಿರೀಶ್ ಗೆ 2012ರಲ್ಲಿ ರಾಜ್ಯೋತ್ಸವ, 2013ರಲ್ಲಿ ಪದ್ಮಶ್ರೀ ಮತ್ತು 2014ರಲ್ಲಿ ಅರ್ಜುನ್ ಪ್ರಶಸ್ತಿಗಳು ಸಿಕ್ಕಿವೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಗಿರೀಶ್ ಮತ್ತು ಸಹನಾ ಕುಟುಂಬಿಕರು ಹಾಗೂ ಸ್ನೇಹಿತರು ಭಾಗವಹಿಸಿದರು.