ಧೋನಿ ದಾಖಲೆ ಹಿಂದಿಕ್ಕಿದ ವಿರಾಟ್ ಕೊಹ್ಲಿ

ಧೋನಿ ದಾಖಲೆ ಹಿಂದಿಕ್ಕಿದ ವಿರಾಟ್ ಕೊಹ್ಲಿ

HSA   ¦    Sep 03, 2019 10:40:53 AM (IST)
ಧೋನಿ ದಾಖಲೆ ಹಿಂದಿಕ್ಕಿದ ವಿರಾಟ್ ಕೊಹ್ಲಿ

ಕಿಂಗ್ ಸ್ಟನ್: ಎರಡನೇ ಟೆಸ್ಟ್ ನಲ್ಲಿ ವೆಸ್ಟ್ ಇಂಡೀಸ್ ನ್ನು 257 ರನ್ ಗಳಿಂದ ಪರಾಭವಗೊಳಿಸಿದ ಟೀಂ ಇಂಡಿಯಾ ನಾಯಕ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆ ಹಿಂದಿಕ್ಕಿದ್ದಾರೆ.

ಎರಡನೇ ಟೆಸ್ಟ್ ಗೆದ್ದುಕೊಂಡ ಕೊಹ್ಲಿ ಟೆಸ್ಟ್ ನಾಯಕನಾಗಿ 28 ಗೆಲುವು ಪಡೆದಿದ್ದಾರೆ. 30ರ ಹರೆಯದ ಕೊಹ್ಲಿ 48 ಪಂದ್ಯಗಳಿಂದ 28 ಗೆಲುವು ದಾಖಲಿಸಿಕೊಂಡಿದ್ದಾರೆ.

ಧೋನಿ 60 ಪಂದ್ಯಗಳಲ್ಲಿ 27 ಟೆಸ್ಟ್ ಗೆಲುವು ದಾಖಲಿಸಿಕೊಂಡಿದ್ದರು.

ವಿದೇಶದಲ್ಲಿ ಹೆಚ್ಚು ಟೆಸ್ಟ್ ಗೆಲುವು ದಾಖಲಿಸಿಕೊಂಡ ದಾಖಲೆ ಕೂಡ ಕೊಹ್ಲಿ ಪಾಲಿಗಿದೆ. ಮಾಜಿ ನಾಯಕ ಸೌರವ್ ಗಂಗೂಲಿ 28 ಪಂದ್ಯಗಳಲ್ಲಿ 11ರಲ್ಲಿ ವಿದೇಶದಲ್ಲಿ ಗೆಲುವು ದಾಖಲಿಸಿದ್ದರು.