ಇಮ್ರಾನ್ ತಾಹೀರ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟಿಗೆ ಗುಡ್ ಬೈ

ಇಮ್ರಾನ್ ತಾಹೀರ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟಿಗೆ ಗುಡ್ ಬೈ

HSA   ¦    Jul 06, 2019 05:36:16 PM (IST)
ಇಮ್ರಾನ್ ತಾಹೀರ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟಿಗೆ ಗುಡ್ ಬೈ

ಲಂಡನ್: ಆಸ್ಟ್ರೇಲಿಯಾ ವಿರುದ್ಧ ಶನಿವಾರ ನಡೆಯಲಿರುವ ಪಂದ್ಯವೇ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟಿನಲ್ಲಿ ಅಂತಿಮ ಪಂದ್ಯವೆಂದು ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹೀರ್ ಘೋಷಿಸಿದ್ದಾರೆ.

ಇಮ್ರಾನ್ ತಾಹಿರ್ ವಿಕೆಟ್ ಪಡೆದ ಬಳಿಕ ಅದನ್ನು ಸಂಭ್ರಮಿಸುವ ರೀತಿಯಿಂದ ಹೆಚ್ಚು ಜನಪ್ರಿಯರಾಗಿದ್ದರು. 105 ಏಕದಿನ ಪಂದ್ಯಗಳನ್ನು ಆಡಿರುವ ಇಮ್ರಾನ್ 172 ವಿಕೆಟ್ ಪಡೆದಿದ್ದಾರೆ. 45 ರನ್ ಗಳೀಗೆ ಏಳು ವಿಕೆಟ್ ಉರುಳಿಸಿರುವುದು ತಾಹೀರ್ ಜೀವನಶ್ರೇಷ್ಠ ಬೌಲಿಂಗ್ ಸಾಧನೆ.

1979ರಲ್ಲಿ ಪಾಕಿಸ್ತಾನದಲ್ಲಿ ಜನಿಸಿದ್ದ ತಹೀರ್ 19ರ ಕೆಳಹರೆಯದ ಮತ್ತು ದೇಶೀಯ ಕ್ರಿಕೆಟಿನಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು. 2006ರಲ್ಲಿ ದಕ್ಷಿಣ ಆಫ್ರಿಕಾ ಮೂಲದ ಯುವತಿಯನ್ನು ಮದುವೆಯಾಗಿ ಅಲ್ಲಿನ ಪೌರತ್ವ ಪಡೆದಿದ್ದರು.

ತಾಹೀರ್ ತನ್ನ 32ನೇ ವಯಸ್ಸಿನಲ್ಲಿ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು. ಈ ಸಲದ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ಕಳಪೆ ಪ್ರದರ್ಶನ ನೀಡಿದ್ದು, ಇದರ ಬಳಿಕ ತಾಹೀರ್ ರಾಜೀನಾಮೆ ನೀಡಿರುವರು.