ಬರ್ಮಿಂಗ್ ಹ್ಯಾಮ್ 2022ರ ಕಾಮನ್ವೆಲ್ತ್ ಗೇಮ್ಸ್ ಗೆ ಮಹಿಳಾ ಟಿ-20 ಕ್ರಿಕೆಟ್

ಬರ್ಮಿಂಗ್ ಹ್ಯಾಮ್ 2022ರ ಕಾಮನ್ವೆಲ್ತ್ ಗೇಮ್ಸ್ ಗೆ ಮಹಿಳಾ ಟಿ-20 ಕ್ರಿಕೆಟ್

HSA   ¦    Aug 13, 2019 05:17:26 PM (IST)
ಬರ್ಮಿಂಗ್ ಹ್ಯಾಮ್ 2022ರ ಕಾಮನ್ವೆಲ್ತ್ ಗೇಮ್ಸ್ ಗೆ ಮಹಿಳಾ ಟಿ-20 ಕ್ರಿಕೆಟ್

ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಹಾಗೂ ಇಂಗ್ಲೆಂಡ್ ಮತ್ತು ವೆಲ್ಸ್ ಕ್ರಿಕೆಟ್ ಬೋರ್ಡ್(ಇಸಿಬಿ) ಮಾಡಿರುವ ಮನವಿಯ ಮೇರೆಗೆ ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್(ಸಿಜಿಎಫ್) 2022 ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಮಹಿಳಾ ಟಿ-20 ಕ್ರಿಕೆಟ್ ಸೇರ್ಪಡೆಗೊಳಿಸಿರುವುದಾಗಿ ಘೋಷಿಸಿದೆ.

ಇದು ಮಹಿಳಾ ಕ್ರಿಕೆಟಿಗೆ ಐತಿಹಾಸಿಕ ಕ್ಷಣ ಎಂದು ಐಸಿಸಿ ಕಾರ್ಯನಿರ್ವಾಹಕ ಅಧಿಕಾರಿ ಮನು ಸಾವ್ಹನೆ ತಿಳಿಸಿದರು.

ಇದು ಮಹಿಳಾ ಕ್ರಿಕೆಟ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಸಮುದಾಯಕ್ಕೆ ಐತಿಹಾಸಿಕ ಕ್ಷಣ. ಮಹಿಳಾ ಕ್ರಿಕೆಟ್ ಇನ್ನಷ್ಟು ಬಲಗೊಳ್ಳುತ್ತಾ ಹೋಗುವುದು ಮತ್ತು ನಮಗೆ ಇದು ಒಂದು ಹೆಮ್ಮೆಯ ವಿಚಾರವಾಗಿದೆ ಎಂದರು.