ಐಸಿಸಿ ಟಿ-20 ವಿಶ್ವಕಪ್ ತಂಡದಲ್ಲಿ ಭಾರತದ ಪೂನಂ ಯಾದವ್ ಗೆ ಸ್ಥಾನ

ಐಸಿಸಿ ಟಿ-20 ವಿಶ್ವಕಪ್ ತಂಡದಲ್ಲಿ ಭಾರತದ ಪೂನಂ ಯಾದವ್ ಗೆ ಸ್ಥಾನ

HSA   ¦    Mar 09, 2020 05:15:56 PM (IST)
ಐಸಿಸಿ ಟಿ-20 ವಿಶ್ವಕಪ್ ತಂಡದಲ್ಲಿ ಭಾರತದ ಪೂನಂ ಯಾದವ್ ಗೆ ಸ್ಥಾನ

ಸಿಡ್ನಿ: ಟಿ-20 ವಿಶ್ವಕಪ್ ಪ್ರವೇಶಿಸಿದ ಭಾರತದ ಮಹಿಳಾ ತಂಡದ ಲೆಗ್ ಸ್ಪಿನ್ನರ್ ಪೂನಂ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಪ್ರಕಟಿಸಿದ ಮಹಿಳಾ ಟಿ20 ಮಹಿಳಾ ವಿಶ್ವಕಪ್ ಆಡುವ 11ರ ಬಳಗದಲ್ಲಿ ಸೇರಿಸಿಕೊಳ್ಳಲಾಗಿದೆ.

ಯುವ ಆರಂಭಿಕ ಆಟಗಾರ್ತಿ ಶಾಫಾಲಿ ವರ್ಮಾ 12ನೇ ಆಟಗಾರ್ತಿಯಾಗಿ ಆಯ್ಕೆ ಆಗಿರುವರು. ಭಾನುವಾರ ಮೆಲ್ಬೊರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ 85 ರನ್ ಗಳಿಂದ ಭಾರತವನ್ನು ಪರಾಭವಗೊಳಿಸಿತ್ತು.

ಐಸಿಸಿ ತಂಡದಲ್ಲಿ ಟಿ-20 ವಿಶ್ವಕಪ್ ಗೆದ್ದ ಐದು ಮಂದಿ ಆಟಗಾರರಿದ್ದಾರೆ. ಇಂಗ್ಲೆಂಡ್ ನ ನಾಲ್ಕು ಮಂದಿ ಆಟಗಾರರು ಮತ್ತು ದಕ್ಷಿಣ ಆಫ್ರಿಕಾದ ಒಬ್ಬಳು ಆಟಗಾರ್ತಿ ಇದರಲ್ಲಿದ್ದಾರೆ.