ವಿಜಯ್ ಭರ್ಜರಿ ಶತಕ: ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯ

ವಿಜಯ್ ಭರ್ಜರಿ ಶತಕ: ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯ

HSA   ¦    Dec 01, 2018 03:25:28 PM (IST)
ವಿಜಯ್ ಭರ್ಜರಿ ಶತಕ: ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯ

ಸಿಡ್ನಿ: ಆರಂಭಿಕ ಆಟಗಾರ ಮುರಳಿ ವಿಜಯ್ ಬಾರಿಸಿದ ಶತಕ, ಕೆಎಲ್ ರಾಹುಲ್ ಅರ್ಧಶತಕದಿಂದ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧದ ಏಕೈಕ ಅಭ್ಯಾಸ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿದೆ.

ಇಂಗ್ಲೆಂಡ್ ಪ್ರವಾಸದ ವೇಳೆ ಅರ್ಧದಲ್ಲೇ ತಂಡದಿಂದ ಹೊರಗಿಡಲ್ಪಟ್ಟಿದ್ದ ವಿಜಯ್ 118 ಎಸೆತಗಳಲ್ಲಿ 129 ರನ್ ಬಾರಿಸಿದರು. ಇದರಲ್ಲಿ 16 ಬೌಂಡರಿಗಳು ಹಾಗೂ ಐದು ಸಿಕ್ಸರ್ ಗಳಿದ್ದವು. ಮೊದಲ ವಿಕೆಟಿಗೆ ರಾಹುಲ್ ಜತೆಗೂಡಿದ ವಿಜಯ್ 109 ರನ್ ಪೇರಿಸಿದರು. ರಾಹುಲ್ 98 ಎಸೆತಗಳಲ್ಲಿ 62 ರನ್ ಬಾರಿಸಿದರು.

ಭಾರತ ನಾಲ್ಕನೇ ದಿನದಾಂತ್ಯದ ವೇಳೆ 2 ವಿಕೆಟ್ ನಷ್ಟಕ್ಕೆ 211 ರನ್ ಮಾಡಿತ್ತು. ಹನುಮ ವಿಹಾರಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದು 15 ರನ್ ಬಾರಿಸಿದರು.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 358 ರನ್ ಮಾಡಿತ್ತು. ಇದಕ್ಕೆ ಉತ್ತರಿಸಿದ ಆಸ್ಟ್ರೇಲಿಯಾ 544 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು.