ಪ್ರೋ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್ ಗೆ ಗೆಲುವು

ಪ್ರೋ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್ ಗೆ ಗೆಲುವು

HSA   ¦    Sep 02, 2019 10:18:13 AM (IST)
ಪ್ರೋ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್ ಗೆ ಗೆಲುವು

ಬೆಂಗಳೂರು: ಪ್ರೋ ಕಬಡ್ಡಿ ಲೀಗ್ ಬೆಂಗಳೂರು ಬುಲ್ಸ್ ತಂಡವು 33-27ರಿಂದ ತಮಿಳ್ ತಲೈವಾಸ್ ವಿರುದ್ಧ ಗೆಲುವು ದಾಖಲಿಸಿಕೊಂಡಿತು.

ಪವನ್ ಶೆರಾವತ್ ಅಮೋಘ ಆಟದ ಫಲವಾಗಿ ಬುಲ್ಸ್ ಗೆಲುವು ದಾಖಲಿಸಿತು. ಪವನ್ 21 ಪ್ರಯತ್ನಗಳಲ್ಲಿ 17 ರೈಡಿಂಗ್ ಪಾಯಿಂಟ್ ಪಡೆದರು. ಬುಲ್ಸ್ ನಾಯಕ ರೋಹಿತ್ 5 ರೈಡಿಂಗ್ ಪಾಯಿಂಟ್ ಪಡೆದರು. ಸಮಿತ್ ಶೆರಾನ್ ಟ್ಯಾಕಲ್ ನಲ್ಲಿ ಐದು ಪಾಯಿಂಟ್ ಸಂಪಾದಿಸಿದರು.

ಮೊದಲಾರ್ಧದಲ್ಲಿ ಬುಲ್ಸ್ 14-23ರ ಮುನ್ನಡೆ ಕಾಯ್ದುಕೊಂಡಿತ್ತು. ದ್ವಿತೀಯಾರ್ಧದಲ್ಲಿ ತಮಿಳ್ ತಲೈವಾಸ್ ಸಮಬಲ ಸಾಧಿಸಿದರೂ ಬುಲ್ಸ್ ಗೆಲುವು ದಾಖಲಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.