ಸೆಮಿಫೈನಲ್ ಸೋಲಿಗೆ ಕಾರಣವೇಯಿತೇ ರೋಹಿತ್-ವಿರಾಟ್ ಮನಸ್ತಾಪ

ಸೆಮಿಫೈನಲ್ ಸೋಲಿಗೆ ಕಾರಣವೇಯಿತೇ ರೋಹಿತ್-ವಿರಾಟ್ ಮನಸ್ತಾಪ

HSA   ¦    Jul 15, 2019 04:00:20 PM (IST)
ಸೆಮಿಫೈನಲ್ ಸೋಲಿಗೆ ಕಾರಣವೇಯಿತೇ ರೋಹಿತ್-ವಿರಾಟ್ ಮನಸ್ತಾಪ

ನವದೆಹಲಿ: ವಿಶ್ವಕಪ್ ಸೆಮಿಫೈನಲ್ ಟೀಂ ಇಂಡಿಯಾ ಸೋಲುಂಡ ಬಳಿಕ ಈಗ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವಿನ ಮನಸ್ತಾಪ ಬಹಿರಂಗವಾಗಿದೆ.

ರೋಹಿತ್ ಮತ್ತು ಕೊಹ್ಲಿ ನಡುವಿನ ಸಂಬಂಧವು ಅಷ್ಟಕಷ್ಟೇ ಇರುವ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮೂರು ವಿಧದ ಕ್ರಿಕೆಟಿಗೆ ಬೇರೆ ಬೇರೆ ನಾಯಕರನ್ನು ಆಯ್ಕೆ ಮಾಡಲಿದೆ ಎಂದು ಹೇಳಿದೆ.

ಒಳ್ಳೆಯ ತಂಡಗಳು ಒಂದು ಟೂರ್ನಿ ಅಂತ್ಯವಾದ ಕೂಡಲೇ ಉತ್ತಮ ತಯಾರಿ ಆರಂಭಿಸುತ್ತದೆ ಮತ್ತು ಇದಕ್ಕೆ ಒಳ್ಳೆಯ ಉದಾಹರಣೆ ಇಂಗ್ಲೆಂಡ್ ವಿಶ್ವಕಪ್ ಗೆದ್ದಿರುವುದು. ಮುಂದಿನ ವಿಶ್ವಕಪ್ ದೃಷ್ಟಿಯಿಂದ ರೋಹಿತ್ ಏಕದಿನ ಹಾಗೂ ಟಿ-20 ಮತ್ತು ಕೊಹ್ಲಿ ಟೆಸ್ಟ್ ಕ್ರಿಕೆಟಿನಲ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ ಎಂದು ಬಿಸಿಸಿಐಯ ಪದಾಧಿಕಾರಿಯೊಬ್ಬರು ತಿಳಿಸಿದರು.

ಏಕದಿನಗಳಲ್ಲಿ ನಾಯಕತ್ವ ಪಡೆಯಲು ರೋಹಿತ್ ಗೆ ಇದು ಸರಿಯಾದ ಸಮಯ. ಈಗಿನ ನಾಯಕ ಮತ್ತು ಆಡಳಿತಕ್ಕೆ ಒಳ್ಳೆಯ ಬೆಂಬಲವಿದೆ. ಮುಂದಿನ ವಿಶ್ವಕಪ್ ದೃಷ್ಟಿಯಿಂದ ಯೋಜನೆ ಹಾಕಬೇಕು. ಈ ಸ್ಥಾನಕ್ಕೆ ರೋಹಿತ್ ಸರಿಯಾದ ವ್ಯಕ್ತಿ ಎಂದು ಪದಾಧಿಕಾರಿ ಹೇಳಿದರು.

ರೋಹಿತ್ ಮತ್ತು ಕೊಹ್ಲಿ ಮಧ್ಯೆ ಮನಸ್ತಾಪವಿದೆ ಎಂದು ಕೇಳಿಬಂದ ಸುದ್ದಿಗಳ ಬಳಿಕ ಬಿಸಿಸಿಐ ಪದಾಧಿಕಾರಿ ಹೇಳಿಕೆಯು ಮನಸ್ತಾಪದ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡುವಂತೆ ಮಾಡಿದೆ.