ಭರ್ಜರಿ ಗೆಲುವಿನೊಂದಿಗೆ ಮುಂದಿನ ಸುತ್ತಿಗೇರಿದ ಆತಿಥೇಯ ರಷ್ಯಾ

ಭರ್ಜರಿ ಗೆಲುವಿನೊಂದಿಗೆ ಮುಂದಿನ ಸುತ್ತಿಗೇರಿದ ಆತಿಥೇಯ ರಷ್ಯಾ

HSA   ¦    Jun 20, 2018 09:58:22 AM (IST)
ಭರ್ಜರಿ ಗೆಲುವಿನೊಂದಿಗೆ ಮುಂದಿನ ಸುತ್ತಿಗೇರಿದ ಆತಿಥೇಯ ರಷ್ಯಾ

ಮಾಸ್ಕೋ: ಈಜಿಪ್ಟ್ ವಿರುದ್ಧ 3-1ರ ಗೆಲುವು ದಾಖಲಿಸಿಕೊಂಡ ರಷ್ಯಾ ಫಿಫಾ ವಿಶ್ವಕಪ್ ನಲ್ಲಿ ಎರಡನೇ ಸುತ್ತಿಗೇರಿದೆ.

ಗ್ರೂಪ್ ಎಯಲ್ಲಿ ಆರು ಅಂಕಗಳನ್ನು ಪಡೆದುಕೊಂಡಿರುವ ರಷ್ಯಾ ಅಗ್ರಸ್ಥಾನ ಪಡೆದುಕೊಂಡಿದೆ. 15 ನಿಮಿಷಗಳ ಅಂತರದಲ್ಲಿ ಮೂರು ಗೋಲು ಬಾರಿಸಿದ ರಷ್ಯಾ ಮುಂದಿನ ಸುತ್ತಿನ ಟಿಕೆಟ್ ದೃಢಪಡಿಸಿಕೊಂಡಿತು. ಈಜಿಪ್ಟ್ ನ ಮೊಹಮದ್ ಸಲಾಹ ಪೆನಾಲ್ಟಿಯಲ್ಲಿ ಗೋಲು ಬಾರಿಸಿದರು.

ಅಲೆಕ್ಸಾಂಡ್ರ ಗೊಲೊವಿನ್ ಬಾರಿಸಿದ ಚೆಂಡನ್ನು ಈಜಿಪ್ಟ್ ನ ಗೋಲ್ ಕೀಪರ್ ಮೊಹಮೆದ್ ಅಲ್ ಶೆನವ್ಯ ಪಂಚ್ ಮಾಡಿದರು. ರೋಮನ್ ಝೊಬನಿನ್ ಇದನ್ನು ಗೋಲಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದ ವೇಳೆ ಇದನ್ನು ತಡೆಯಲು ಬಂದು ಅಹ್ಮದ್ ಫಥಿ ಕಾಲು ತಾಗಿ ಚೆಂಡು ಗೋಲ್ ಬಾಕ್ಸ್ ನೊಳಗೆ ಹೋಗಿದೆ. ಇದು ರಷ್ಯಾಗೆ ಈಜಿಪ್ಟ್ ಒದಗಿಸಿಕೊಟ್ಟ ಸ್ವಗೋಲು ಆಗಿದೆ. ಇದುವರೆಗೆ ಟೂರ್ನಿಯಲ್ಲಿ ಒಟ್ಟು 5 ಸ್ವಗೋಲು ದಾಖಲಾಗಿದೆ.

ರಷ್ಯಾ ಪರವಾಗಿ ಡೆನಿಸ್ ಚೆರ್ಯಶೆವ್ ಎರಡನೇ ಗೋಲು ಬಾರಿಸಿ ತಂಡದ ಮುನ್ನಡೆ ದ್ವಿಗುಣಗೊಳಿಸಿದರು. ಇದರ ಎರಡು ನಿಮಿಷ ಬಳಿಕ ಅರ್ತೆಮ್ ಡಿಜೂಬಾ ಬಾರಿಸಿದ ಗೋಲಿನಿಂದ ರಷ್ಯಾ 3-0 ಮುನ್ನಡೆ ಸಾಧಿಸಿತು. ಸಲಾಹ ಈಜಿಪ್ಟ್ ಪರ ಗೋಲು ಬಾರಿಸಿದರೂ ಇದು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿಲ್ಲ.