ಪಾಕ್ ಆಟಗಾರನಿಗೆ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಸಲಹೆ ಬೇಕಂತೆ!

ಪಾಕ್ ಆಟಗಾರನಿಗೆ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಸಲಹೆ ಬೇಕಂತೆ!

HSA   ¦    Apr 22, 2019 06:43:58 PM (IST)
ಪಾಕ್ ಆಟಗಾರನಿಗೆ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಸಲಹೆ ಬೇಕಂತೆ!

ನವದೆಹಲಿ: ಪಾಕಿಸ್ತಾನದ ಆರಂಭಿಕ ಆಟಗಾರ ಅಬಿದ್ ಅಲಿ ವಿಶ್ವಕಪ್ ಗೆ ಮೊದಲು ಸಚಿನ್ ತೆಂಡೂಲ್ಕರ್ ಅವರಿಂದ ಸಲಹೆ ಪಡೆಯಲು ಬಯಸಿದ್ದಾರೆ.

ಪಾಕಿಸ್ತಾನದ ದೇಶೀಯ ಕ್ರಿಕೆಟಿನಲ್ಲಿ ಉತ್ತಮ ರನ್ ಗಳಿಸುತ್ತಿದ್ದ ಅಬಿದ್ ಅಲಿ ಅವರು ಆಸ್ಟ್ರೇಲಿಯಾ ವಿರುದ್ಧದ ಚೊಚ್ಚಲ ಏಕದಿನ ಪಂದ್ಯದಲ್ಲೇ ಶತಕ ಬಾರಿಸಿದ್ದರು.

ತಾನು ಹಿಂದಿನಿಂದಲೂ ಸಚಿನ ಅವರನ್ನು ಮಾದರಿಯನ್ನಾಗಿಸಿದ್ದೇನೆ ಮತ್ತು ಅವರಿಂದ ಬ್ಯಾಟಿಂಗ್ ಬಗ್ಗೆ ಸಲಹೆ ಪಡೆಯಲು ಬಯಸಿದ್ದೇನೆ. ಸಲಹೆ ಕೇಳಿದರೆ ಖಂಡಿತವಾಗಿಯೂ ಸಚಿನ್ ಅವರು ಇದನ್ನು ತಿರಸ್ಕರಿಸಲಿಕ್ಕಿಲ್ಲ ಎಂದು ಅಬಿದ್ ಅಲಿ ತಿಳಿಸಿದರು.

ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಬೇಕು ಎನ್ನುವುದು ನನ್ನ ಇಚ್ಛೆ. ಅವರನ್ನು ಒಮ್ಮೆ ಅಪ್ಪಿ ಹಿಡಿಯಬೇಕು ಮತ್ತು ಎಲ್ಲಾ ಶ್ರೇಷ್ಠ ಆಟಗಾರರಂತೆ ಅವರು ಕೂಡ ನನಗೆ ಬ್ಯಾಟಿಂಗ್ ಸಲಹೆ ನೀಡಲು ಇಲ್ಲ ಎನ್ನಲಾರರು ಎಂದರು.