ಫುಟ್ ಬಾಲ್ ನಲ್ಲಿ ಮಿಲನ್ಸ್ ಎ ತಂಡಕ್ಕೆ ಗೆಲುವು

ಫುಟ್ ಬಾಲ್ ನಲ್ಲಿ ಮಿಲನ್ಸ್ ಎ ತಂಡಕ್ಕೆ ಗೆಲುವು

Jan 05, 2017 12:18:56 PM (IST)

ಮಡಿಕೇರಿ: ವಿರಾಜಪೇಟೆ ತಾಲೂಕಿನ ಅಮ್ಮತ್ತಿಯಲ್ಲಿ ಮೂರು ದಿನಗಳ ಕಾಲ ನಡೆದ ಮಿಲನ್ಸ್ ಫುಟ್ಬಾಲ್ ಕಪ್ ಪಂದ್ಯಾವಳಿಯಲ್ಲಿ ಅತಿಥೇಯ ಮಿಲನ್ಸ್ 'ಎ' ತಂಡ ಗೆಲುವಿನ ಹೆಚ್.ಡಬ್ಲೂ.ಎ. ತಲಪಾಡಿ ಮಂಗಳೂರು ತಂಡವನ್ನು ಸೋಲಿಸಿ ಗೆಲುವಿನ ನಗು ಬೀರಿದೆ.

ಅಮ್ಮತ್ತಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ 9ನೇ ವರ್ಷದ ಮಿಲನ್ಸ್ ಫುಟ್ಬಾಲ್ ಕಪ್ ಪಂದ್ಯಾವಳಿಯಲ್ಲಿ ಹಲವಾರು ತಂಡಗಳು ಭಾಗವಹಿಸಿದ್ದರೂ ಹೆಚ್ ಡಬ್ಲ್ಯೂಎ ತಲಪಾಡಿ ಮಂಗಳೂರು ತಂಡವು ತೀವ್ರ ಪೈಪೋಟಿ ನೀಡಿ ಪೈನಲ್ ಪ್ರವೇಶಿಸಿತ್ತು.

ಫೈನಲ್ ಪಂದ್ಯವು. ಅತಿಥೇಯ ಮಿಲನ್ಸ್ ಎ ತಂಡದೊಂದಿಗೆ ನಡೆದು ರೋಚಕ ಘಟ್ಟವನ್ನು ತಲುಪಿತ್ತು. ನೆರೆದವರ ಶಿಳ್ಳೆ ಚಪ್ಪಾಳೆಗಳ ಪ್ರೋತ್ಸಾಹ ಆಟಗಾರರನ್ನು ಉತ್ತೇಜಿಸುತ್ತಿತ್ತು. ಕೊನೆಗೆ ಮಿಲನ್ಸ್ ಎ ತಂಡ 4-2 ಗೋಲುಗಳಿಂದ ಹೆಚ್.ಡಬ್ಲೂ.ಎ. ತಲಪಾಡಿ ಮಂಗಳೂರು ವಿರುದ್ಧ ಜಯ ಸಾಧಿಸಿತು. ಇದರಿಂದ ಹೆಚ್.ಡಬ್ಲೂ.ಎ. ತಲಪಾಡಿ ಮಂಗಳೂರು ತಂಡ ರನ್ನರ್ಸ್ ಗೆ ತೃಪ್ತಿಪಟ್ಟು ಕೊಳ್ಳಬೇಕಾಯಿತು.

ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲೊಂಡಿದ್ದ ಶಾಸಕ ಕೆ.ಜಿ.ಬೋಪಯ್ಯ ಅವರು ಪ್ರತಿಭಾವಂತ ಕ್ರೀಡಾಪಟುಗಳು ರಾಜಕೀಯದಿಂದಾಗಿ ಅವಕಾಶ ವಂಚಿತರಾಗುತ್ತಿದ್ದಾರೆ. ಜಿಲ್ಲೆಯು ಕ್ರೀಡೆಯ ತವರೂರು. ಹಾಕಿಗೆ ನೀಡುವ ಪ್ರೋತ್ಸಾಹ ಫುಟ್ಬಾಲ್ ಆಟಕ್ಕೂ ದೊರಕಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ, ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ ಕೊಡಗು ಜಿಲ್ಲಾ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷ ಮೋಹನ್ ಅಯ್ಯಪ್ಪ, ವೀರಾಜಪೇಟೆ ತಾಲೂಕು ಬಿ.ಜೆ.ಪಿ. ಕಾರ್ಯದರ್ಶಿ ಸುವಿನ್ ಗಣಪತಿ, ಪಾಲಿಬೆಟ್ಟ ಸ್ಥಾನೀಯ ಸಮಿತಿ ಅಧ್ಯಕ್ಷ ಟಿ.ಜಿ. ವಿಜೇಶ್, ಅಮ್ಮತ್ತಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಟ್ಟಂಡ ಕೃಷ್ಣ, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಮಾಚಿಮಂಡ ವಸಂತ್, ಮಿಲನ್ಸ್ ಯೂತ್ ಕ್ಲಬ್ ಅಧ್ಯಕ್ಷ ಲಿಜೇಶ್ ಮೊದಲಾದವರು ಉಪಸ್ಥಿತರಿದ್ದರು