ಬೆಲ್ಜಿಯಂ ಮಣಿಸಿದ ಫ್ರಾನ್ಸ್ ವಿಶ್ವಕಪ್ ಫೈನಲಿಗೆ

ಬೆಲ್ಜಿಯಂ ಮಣಿಸಿದ ಫ್ರಾನ್ಸ್ ವಿಶ್ವಕಪ್ ಫೈನಲಿಗೆ

HSA   ¦    Jul 11, 2018 11:17:27 AM (IST)
ಬೆಲ್ಜಿಯಂ ಮಣಿಸಿದ ಫ್ರಾನ್ಸ್ ವಿಶ್ವಕಪ್ ಫೈನಲಿಗೆ

ಸೇಂಟ್ ಪೀಟರ್ಸ್ ಬರ್ಗ್: ವಿಶ್ವಕಪ್ ನ ಸೆಮಿಫೈನಲಿನಲ್ಲಿ ಬೆಲ್ಜಿಯಂ ವಿರುದ್ಧ 1-0 ಗೆಲುವು ದಾಖಲಿಸಿಕೊಂಡ ಫ್ರಾನ್ಸ್ ತಂಡವು ಫೈನಲಿಗೆ ಪ್ರವೇಶಿಸಿದೆ.

ಸಾಮ್ಯುಲ್ ಉಮ್ಚಿಟಿ 51ನೇ ನಿಮಿಷದಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಹೋರಾಟಕಾರಿ ಪಂದ್ಯದಲ್ಲಿ ಫ್ರಾನ್ಸ್ ಸೆಮಿಫೈನಲ್ ಪಂದ್ಯವನ್ನು ಗೆದ್ದುಕೊಂಡು 12 ವರ್ಷ ಬಳಿಕ ಫೈನಲಿಗೇರಿದೆ.

1998ರಲ್ಲಿ ವಿಶ್ವಕಪ್ ಗೆದ್ದುಕೊಂಡಿದ್ದ ಫ್ರಾನ್ಸ್ ತಂಡ 2006ರ ಬಳಿಕ ಫೈನಲಿಗೇರಲು ವಿಫಲವಾಗಿತ್ತು.

ಇಂದು ಇಂಗ್ಲೆಂಡ್ ಮತ್ತು ಕ್ರೊವೇಶಿಯಾ ಮಧ್ಯೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಜುಲೈ 15ರಂದು ಫೈನಲ್ ಪಂದ್ಯವು ನಡೆಯಲಿರುವುದು.