ರೊನಾಲ್ಡೊ ಭವಿಷ್ಯದ ಬಗ್ಗೆ ಚಿಂತಿಸಿಲ್ಲ: ಫೆರ್ನಾಂಡಿಸ್

ರೊನಾಲ್ಡೊ ಭವಿಷ್ಯದ ಬಗ್ಗೆ ಚಿಂತಿಸಿಲ್ಲ: ಫೆರ್ನಾಂಡಿಸ್

HSA   ¦    Jun 12, 2018 05:29:19 PM (IST)
ರೊನಾಲ್ಡೊ ಭವಿಷ್ಯದ ಬಗ್ಗೆ ಚಿಂತಿಸಿಲ್ಲ: ಫೆರ್ನಾಂಡಿಸ್

ಕ್ರಾಟೊವೊ: ರಿಯಲ್ ಮ್ಯಾಡ್ರಿಡ್ ಕ್ಲಬ್ ಪರವಾಗಿ ಆಡುವ ಬಗ್ಗೆ ಪೋರ್ಚುಗಲ್ ನ ಕ್ರಿಸ್ಟಿಯಾನೋ ರೊನಾಲ್ಡೊ ಭವಿಷ್ಯದ ಹೆಚ್ಚು ಚಿಂತಿತರಾಗಿಲ್ಲವೆಂದು ಮಿಡ್ ಫೀಲ್ಡರ್ ಮ್ಯಾನುಯೆಲ್ ಫೆರ್ನಾಂಡಿಸ್ ತಿಳಿಸಿದ್ದಾರೆ.

ಚಾಂಪಿಯನ್ಸ್ ಲೀಗ್ ಫೈನಲಿನಲ್ಲಿ ಲಿವರ್ ಪೂಲ್ ವಿರುದ್ಧ ರಿಯಲ್ ಮ್ಯಾಡ್ರಿಡ್ ಗೆ 3-1ರ ಗೆಲುವು ತಂದುಕೊಟ್ಟ ಬಳಿಕ 33ರ ಹರೆಯದ ರೊನಾಲ್ಡೊ ಅವರು ಕ್ಲಬ್ ಬಿಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು.

ವಿಶ್ವಕಪ್ ಫುಟ್ಬಾಲ್ ಆಡಲು ಮಾಸ್ಕೋಗೆ ಬಂದಿರುವ ಪೋರ್ಚುಗಲ್ ತಂಡದ ಅಭ್ಯಾಸದ ವೇಳೆ ಮಾತನಾಡಿದ ಫೆರ್ನಾಂಡಿಸ್, ಕ್ರಿಸ್ಟಿಯಾನೊ ಬಗ್ಗೆ ನಕಾರಾತ್ಮಕವಾಗಿ ಏನೂ ಹೇಳಲಿಕ್ಕಿಲ್ಲ. ಆತ ಹೆಚ್ಚಿನ ಗಮನಹರಿಸಿದ್ದಾನೆ ಮತ್ತು ತನ್ನ ಭವಿಷ್ಯದ ಬಗ್ಗೆ ಯಾವುದೇ ಚಿಂತೆಯಿರುವಂತೆ ಕಾಣುತ್ತಿಲ್ಲವೆಂದರು.

ರೊನಾಲ್ಡೊ ಅವರು ರಿಯಲ್ ಮ್ಯಾಡ್ರಿಡ್ ನಿಂದ ಹೊರಹೋಗುವ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಕೆಲವೊಂದು ವರದಿಗಳು ಹೇಳಿವೆ. ಆದರೆ ಇದು ಇನ್ನಷ್ಟೇ ದೃಢಪಡಬೇಕಾಗಿದೆ.