ಸೀರೆ ಉಟ್ಟು, ಬಿಂದಿಯಿಟ್ಟು ಅಲ್ಪಸಂಖ್ಯಾತರಿಗೆ ಬೆಂಬಲ ಸೂಚಿಸಿದ ಕ್ರಿಕೆಟಿಗ ಗಂಭೀರ್

ಸೀರೆ ಉಟ್ಟು, ಬಿಂದಿಯಿಟ್ಟು ಅಲ್ಪಸಂಖ್ಯಾತರಿಗೆ ಬೆಂಬಲ ಸೂಚಿಸಿದ ಕ್ರಿಕೆಟಿಗ ಗಂಭೀರ್

YK   ¦    Sep 14, 2018 10:50:35 AM (IST)
ಸೀರೆ ಉಟ್ಟು, ಬಿಂದಿಯಿಟ್ಟು ಅಲ್ಪಸಂಖ್ಯಾತರಿಗೆ ಬೆಂಬಲ ಸೂಚಿಸಿದ ಕ್ರಿಕೆಟಿಗ ಗಂಭೀರ್

‌ನವದೆಹಲಿ: ಲೈಂಗಿಕ ಅಲ್ಪ ಸಂಖ್ಯಾತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಸೀರೆ ಉಟ್ಟು, ಹಣೆಗೆ ಬಿಂದಿಯಿಟ್ಟು ಎಲ್ಲರ ಗಮನವನ್ನು ಸೆಳೆದರು.

ಅವರು ಗುರುವಾರ ಹಿಜ್ರಾ ಹಬ್ಬದ 7ನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಂತೆ ಲೈಂಗಿಕ ಅಲ್ಪಸಂಖ್ಯಾತರನ್ನು ಗೌರವಿಸಬೇಕು ಎಂದು ಮನವಿಯನ್ನು ಮಾಡಿದರು.

ಲೈಂಗಿಕ ಅಲ್ಪಸಂಖ್ಯಾತರಿಗೆ ಗಂಭೀರ್ ಅವರು ತೋರಿದ ಗೌರವಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಗಂಭೀರ್ ಸೀರೆ ಉಟ್ಟು, ಬಿಂದು ಇಟ್ಟುಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.