ರೋಹಿತ್ ಶತಕದಲೆಯಲ್ಲಿ ಕೊಚ್ಚಿ ಹೋದ ಪಾಕಿಸ್ತಾನ

ರೋಹಿತ್ ಶತಕದಲೆಯಲ್ಲಿ ಕೊಚ್ಚಿ ಹೋದ ಪಾಕಿಸ್ತಾನ

HSA   ¦    Jun 17, 2019 09:22:17 AM (IST)
ರೋಹಿತ್ ಶತಕದಲೆಯಲ್ಲಿ ಕೊಚ್ಚಿ ಹೋದ ಪಾಕಿಸ್ತಾನ

ಮ್ಯಾಂಚೆಸ್ಟರ್: ರೋಹಿತ್ ಶರ್ಮಾ ಭರ್ಜರಿ ಶತಕ ಮತ್ತು ಬೌಲರ್ ಗಳ ಅದ್ಭುತ ಪ್ರದರ್ಶನ ನೆರವಿನಿಂದ ಐಸಿಸಿ ವಿಶ್ವಕಪ್ 2019ರ ಪಂದ್ಯದಲ್ಲಿ ಭಾರತ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 89 ರನ್ ಗೆಲುವು ದಾಖಲಿಸಿಕೊಂಡಿದೆ.

ಈ ಗೆಲುವಿನೊಂದಿಗೆ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ 7-0 ಗೆಲುವಿನ ದಾಖಲೆ ಕಾಯ್ದುಕೊಂಡಿದೆ.

ರೋಹಿತ್ ಶರ್ಮಾ ಕೇವಲ 113 ಎಸೆತಗಳಲ್ಲಿ 140 ರನ್ ಸಿಡಿಸಿ, ತನ್ನ 24ನೇ ಏಕದಿನ ಶತಕದೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಅರ್ಧ ಶತಕದಿಂದ ಭಾರತ ಐದು ವಿಕೆಟ್ ನಷ್ಟಕ್ಕೆ 336 ರನ್ ಬಾರಿಸಿತು.

ಪಾಕ್ ನ ಫಖರ್ ಜಮನ್(62) ಮತ್ತು ಬಾಬರ್ ಅಜಂ(48) ಹೊರತುಪಡಿಸಿ, ಉಳಿದ ಬ್ಯಾಟ್ಸ್ ಮೆನ್ ಗಳು ಭಾರತದ ಬೌಲಿಂಗ್ ದಾಳಿ ಮುಂದೆ ಕಂಗೆಟ್ಟರು. ಪಾಕಿಸ್ತಾನ 35 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 166 ರನ್ ಮಾಡಿದ್ದಾಗ ಮತ್ತೆ ಮಳೆ ಅಡ್ಡಿ ಉಂಟು ಮಾಡಿತು. ಪಾಕ್ ಗೆ 40 ಓವರ್ ಗಳಲ್ಲಿ 302 ರನ್ ಮಾಡುವ ಗುರಿ ಸಿಕ್ಕಿತು. ಆದರೆ ಕೇವಲ 212 ರನ್ ಮಾಡಲಷ್ಟೇ ಶಕ್ತವಾಯಿತು.