ಕ್ರಿಸ್ ಗೇಲ್ ಅಬ್ಬರದ ಆಟಕ್ಕೆ ಸೋತು ಮಣಿದ ಚೆನ್ನೈ ಸೂಪರ್ ಕಿಂಗ್ಸ್

ಕ್ರಿಸ್ ಗೇಲ್ ಅಬ್ಬರದ ಆಟಕ್ಕೆ ಸೋತು ಮಣಿದ ಚೆನ್ನೈ ಸೂಪರ್ ಕಿಂಗ್ಸ್

SRJ   ¦    Apr 16, 2018 11:00:50 AM (IST)
ಕ್ರಿಸ್ ಗೇಲ್ ಅಬ್ಬರದ ಆಟಕ್ಕೆ ಸೋತು ಮಣಿದ ಚೆನ್ನೈ ಸೂಪರ್ ಕಿಂಗ್ಸ್

ಮೊಹಾಲಿ: ಐಪಿಎಲ್ 2018ರ 11ನೇ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅಬ್ಬರದ ಬ್ಯಾಟಿಂಗ್ ನಡೆಸಿದರೂ, 5 ವಿಕೆಟ್ ನಷ್ಟಕ್ಕೆ ಕಿಂಗ್ ಇಲೆವನ್ ಪಂಜಾಬ್ ತಂಡದ ವಿರುದ್ಧ ಸೋಲಬೇಕಾಯಿತು.

ಆರಂಭಿಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರ ಹೊಡೆತಕ್ಕೆ ತತ್ತರಿಸಿದ ಧೋನಿ ತಂಡ 193 ರನ್ ಗಳಿಸಿ ಸೋಲೊಪ್ಪಿಕೊಂಡರು. ಮೊದಲು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡದ ಕ್ರಿಸ್ ಗೇಲ್ 33 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಬಾರಿಸಿ 63 ರನ್ ಗಳಿಸಿ ಪಂಜಾಬ್ ತಂಡ ಪಂದ್ಯ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದರು.

ಗೇಲ್ ಅವರ ಮೊದಲ ವಿಕೆಟ್ ಜೊತೆಯಾಟದಲ್ಲಿ ಇನ್ನಿಂಗ್ಸ್ ಆರಂಭಿಸಿದ ಕನ್ನಡಿಗ ಕೆ.ಎಲ್ ರಾಹುಲ್ 37 ರನ್ (22 ಎಸೆತ, 7 ಬೌಂಡರಿ) ಗಳಿಸಿ ಒಟ್ಟು 96 ರನ್ ಪೇರಿಸುವಲ್ಲಿ ಯಶಸ್ವಿಯಾದರು. ಮಾಯಾಂಕ್ 19 ಎಸೆತಗಳಲ್ಲಿ 30 ರನ್ ಗಳಿಸಿದರೆ, ಕರುಣ್ 17 ಎಸೆತಗಳಲ್ಲಿ 29 ರನ್ ಗಳಿಸಿ ಒಟ್ಟು ಪಂಜಾಬ್ ತಂಡ 197/7 ಮೊತ್ತ ದಾಖಲಿಸಿತು.

ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಗಳಿಗೆ 193 ಸ್ಕೋರ್ ಮಾಡಿತು. ಮಹೇಂದ್ರ ಸಿಂಗ್ ಧೋನಿ 79 ರನ್ ಗಳಿಸಿದರೆ, ಅಂಬಟಿ ರಾಯುಡು 49 ರನ್ ಗಳಿಸಿದರು.