ತ್ರಿಕೋನ ಸರಣಿ ಫೈನಲಿನಲ್ಲಿ ಭಾರತದ ಮಹಿಳೆಯರಿಗೆ ಸೋಲು

ತ್ರಿಕೋನ ಸರಣಿ ಫೈನಲಿನಲ್ಲಿ ಭಾರತದ ಮಹಿಳೆಯರಿಗೆ ಸೋಲು

HSA   ¦    Feb 12, 2020 01:04:50 PM (IST)
ತ್ರಿಕೋನ ಸರಣಿ ಫೈನಲಿನಲ್ಲಿ ಭಾರತದ ಮಹಿಳೆಯರಿಗೆ ಸೋಲು

ಮೆಲ್ಬರ್ನ್: ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳೆಯರು ಆಸ್ಟ್ರೇಲಿಯಾದ ವಿರುದ್ಧ ಸೋಲುಂಡಿದ್ದಾರೆ.

ಫೈನಲಿನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ ಆರು ವಿಕೆ್ ಕಳಕೊಂಡು 155 ರನ್ ಗಳಿಸಿತು. ಇದಕ್ಕೆ ಉತ್ತರಿಸಿದ ಭಾರತ ಮಂದಾನ 66 ರನ್ ಹೊರತಾಗಿಯೂ 144 ರನ್ ಗೆ ಆಲೌಟ್ ಆಯಿತು.

15ನೇ ಓವರ್ ನಲ್ಲಿ ತಂಡದ ಮೊತ್ತ 115 ರನ್ ಇದ್ದಾಗ ಮಂದಾನ ಔಟ್ ಆಗಿ ನಿರ್ಮಿಸಿದರು. ಆದರೆ ಇದರ ಬಳಿಕ ಬೇರೆ ಯಾವ ಆಟಗಾರ್ತಿಯರು ಉತ್ತಮವಾಗಿ ಆಡದೆ ಇದ್ದ ಪರಿಣಾಮ ಭಾರತ 11 ರನ್ ಸೋಲುಂಡಿತು.

ತ್ರಿಕೋನ ಟಿ-20 ಸರಣಿಯಲ್ಲಿ ಇಂಗ್ಲೆಂಡ್ ತೃತೀಯ ತಂಡವಾಗಿತ್ತು.