ರಾಜ್ಯ ಮಟ್ಟದ ಟೆಕ್ವಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಮಡಿಕೇರಿ ವಿದ್ಯಾರ್ಥಿಗಳಿಗೆ ಪದಕ

ರಾಜ್ಯ ಮಟ್ಟದ ಟೆಕ್ವಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಮಡಿಕೇರಿ ವಿದ್ಯಾರ್ಥಿಗಳಿಗೆ ಪದಕ

CI   ¦    Aug 28, 2019 04:47:51 PM (IST)
ರಾಜ್ಯ ಮಟ್ಟದ ಟೆಕ್ವಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಮಡಿಕೇರಿ ವಿದ್ಯಾರ್ಥಿಗಳಿಗೆ ಪದಕ

ಮಡಿಕೇರಿ: ರಾಜ್ಯ ಮಟ್ಟದ ಸಬ್ ಜೂನಿಯರ್, ಕೆಡೆಟ್, ಜೂನಿಯರ್ ಹಾಗೂ ಸೀನಿಯರ್ ಟೆಕ್ವಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಮಡಿಕೇರಿಯ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಕರ್ನಾಟಕ ಟೆಕ್ವಾಂಡೊ ಸಂಸ್ಥೆ, ಒಇಹೆಚ್‍ಎಸ್ ಟೆಕ್ವಾಂಡೊ ಕೇಂದ್ರ ಹಾಗೂ ಪ್ರಿನ್ಸ್ ಟೆಕ್ವಾಂಡೊ ಅಕಾಡೆಮಿ ವತಿಯಿಂದ ಬೆಂಗಳೂರಿನ ಡೆಕತ್‍ಲಾನ್ ಅನುಭವ ಕ್ರೀಡಾಂಗಣದಲ್ಲಿ ಆ.23 ರಿಂದ 25 ರವರೆಗೆ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪೂಜಾರಿರ ಬೃಹತ್ ಬೋಪಯ್ಯ 2 ಚಿನ್ನ ಹಾಗೂ 1 ಬೆಳ್ಳಿ, ಚಿನ್ಮಯಿ ಭಟ್ 2 ಚಿನ್ನ, ತೆನ್ನಿರಾ ಶಾನ್ ಪೊನ್ನಪ್ಪ 2 ಚಿನ್ನ, ಲತಿಕಾ ಎಸ್.ನಾಯಕ್ 1 ಚಿನ್ನ, 1 ಬೆಳ್ಳಿ, ಆರ್.ಲೋಹಿತ್ 1 ಚಿನ್ನ, 1 ಕಂಚು, ಪಿ.ದರ್ಶನ್ 1 ಚಿನ್ನ, 1 ಕಂಚು, ಬೈಲೆರಾ ಪ್ರೊನಿಕ್ಷಾ ವಿಶ್ವನಾಥ್ 1 ಚಿನ್ನ, ಅಂಬೆಕಲ್ಲು ಮನಿಶ್ ಕಾಳಪ್ಪ 2 ಬೆಳ್ಳಿ, ಗೌರವ್ ಎಂ.ಯೋಗೀಶ್ 2 ಬೆಳ್ಳಿ, ಐಚಂಡ ಎಂ.ತನೀಶ್ ತಮ್ಮಯ್ಯ 1 ಬೆಳ್ಳಿ, 1 ಕಂಚು, ಕಿರುವಾಲೆ ವಿನಯ್ ಕಾಂತರಾಜ್ 1 ಬೆಳ್ಳಿ, 1 ಕಂಚು, ಕುಂಜಿಲನ ಜತಿನ್ ಹರೀಶ್ 2 ಕಂಚು ಪಡೆದಿದ್ದಾರೆ.

ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ತರಬೇತುದಾರ ಬಿ.ಜಿ.ಲೋಕೇಶ್ ರೈ ಅವರು ತರಬೇತುದಾರರಾಗಿ ಹಾಗೂ ಶಾಂತೆಯಂಡ ತಿಮ್ಮಯ್ಯ ಅವರು ಸಹ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು.